News @ your fingertips
News @ your fingertips
2026 ಜನವರಿ 3ರಿಂದ ಜಾರಿಗೆ ಬರಬೇಕಿದ್ದ ವೇಗದ ಚೆಕ್ ಕ್ಲಿಯರೆನ್ಸ್ನ ಎರಡನೇ ಹಂತದ ಅನುಷ್ಠಾನವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ ) ಮುಂದೂಡಿದೆ.
ಪ್ರಸ್ತಾವಿತ ಎರಡನೇ ಹಂತದ ಅನುಷ್ಠಾನದಡಿ ಬ್ಯಾಂಕುಗಳು ಚೆಕ್ ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ಅದನ್ನು ಪಾಸ್ ಮಾಡಬೇಕು ಅಥವಾ ತಿರಸ್ಕರಿಸಬೇಕಾಗುತ್ತದೆ.
ಡಿಸೆಂಬರ್ 24 ರಂದು ಆರ್ಬಿಐ ಹೊರಡಿಸಿದ ಸುತ್ತೋಲೆಯಲ್ಲಿ, ನಿರಂತರ ಕ್ಲಿಯರಿಂಗ್ ಮತ್ತು ಇತ್ಯರ್ಥ (ಸಿಸಿಎಸ್)ನ ಎರಡನೇ ಹಂತವನ್ನು ಮುಂದಿನ ಸೂಚನೆ ಬರುವವರೆಗೆ ಮುಂದೂಡಲಾಗಿದೆ ಎಂದು ಹೇಳಿದೆ.
ಈ ವರ್ಷದ ಆರಂಭದಲ್ಲಿ ಜಾರಿಗೆ ತರಲಾದ ವ್ಯವಸ್ಥೆಯ ಒಂದನೇ ಹಂತ ಸುಗಮವಾಗಿ ಅನುಷ್ಠಾನವಾಗಿದ್ದು, ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.ಈ ನಿಟ್ಟಿನಲ್ಲಿ ಆರ್ಬಿಐ ಚೆಕ್ ಪ್ರೊಸಿಂಗ್ಗಾಗಿ ಕೆಲಸದ ಸಮಯವನ್ನು ಸಹ ಪರಿಷ್ಕರಿಸಿದೆ. ಚೆಕ್ ಸಲ್ಲಿಕೆಗಾಗಿ ಬ್ಯಾಂಕ್ ಈಗ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತದೆ. ಇದರಿಂದಾಗಿ ಬ್ಯಾಂಕುಗಳು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಚೆಕ್ಗಳನ್ನು ಪಾಸ್ ಮಾಡಲು ಅಥವಾ ತಿರಸ್ಕರಿಸಲು ಸಾಧ್ಯವಾಗುತ್ತಿದೆ..
ಆರ್ಬಿಐ ತನ್ನ ಹಳೆಯ ವ್ಯವಸ್ಥೆಯಿಂದ ದೂರ ಸರಿದು ಚೆಕ್ ಕ್ಲಿಯರಿಂಗ್ವೇಗವಾಗಿ ಮತ್ತು ಸುಗಮವಾಗಿಸಲು ಚೆಕ್ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಪರಿಚಯಿಸಿತು. ಸಿಟಿಎಸ್ ಅಡಿಯಲ್ಲಿ, ಈಗ ಡಿಜಿಟಲ್ ಚಿತ್ರಗಳು ಮತ್ತು ಎಲೆಕ್ಟ್ರಾನಿಕ್ ಡೇಟಾವನ್ನು ಬಳಸಿಕೊಂಡು ಚೆಕ್ಗಳನ್ನು ಕ್ಲಿಯರಿಂಗ್ ಮಾಡಲಾಗುತ್ತಿದೆ. ಇದು ಬ್ಯಾಂಕ್ಗಳ ನಡುವೆ ಚೆಕ್ಗಳನ್ನು ಭೌತಿಕವಾಗಿ ಹಸ್ತಾಂತರಿಸುವ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?