7 rupees

News @ your fingertips

ಕ್ಯಾಪಿಟಲ್ ಗೈನ್ ತೆರಿಗೆ ಬದಲಾವಣೆ ಇಲ್ಲ

ಬಿಜೆಪಿ ಮತ್ತೆ ಅಧಿಕಾರ ಹಿಡಿದರೆ ಕ್ಯಾಪಿಟಲ್ ಗೈನ್ ತೆರಿಗೆಯಲ್ಲಿ ಬದಲಾವಣೆಯಾಗುವ ಸಂಭವವಿದೆ ಎನ್ನುವ ಸುದ್ದಿಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ನಿರಾಕರಿಸಿದ್ದಾರೆ.
ಇಂತಹ ಸುದ್ದಿಗಳು ಎಲ್ಲಿ ಹುಟ್ಟಿಕೊಳ್ಳುತ್ತವೆ.ಇವೆಲ್ಲವೂ ಕಾಲ್ಪನಿಕ.ಅದನ್ನು ಬಿತ್ತರಿಸುವ ಮುನ್ನ ಕನಿಷ್ಠ ವಿತ್ತ ಸಚಿವರಲ್ಲಿ ವಿಚಾರಿಸಿಕೊಳ್ಳುವ ಅಗತ್ಯವಿತ್ತು ಎಂದು ಅವರು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದರೆ ಅದಾಯ ತೆರಿಗೆ ಇಲಾಖೆ ಕ್ಯಾಪಿಟಲ್‌ಗೈನ್ ತೆರಿಗೆಯಲ್ಲಿ ಸಮಗ್ರ ಬದಲಾವಣೆ ತರಲು ಚಿಂತಿಸುತ್ತಿದೆ ಎನ್ನುವ ಸುದ್ದಿಗಳು ಶುಕ್ರವಾರ ವ್ಯಾಪಕವಾಗಿ ಹರಡಿದ್ದವು.
ಶುಕ್ರವಾರ ಆರಂಭಿಕ ಹಂತದಲ್ಲಿ ಷೇರು ಮಾರುಕಟ್ಟೆ ಏರಿಕೆ ಕಂಡಿದ್ದರೂ , ಸುದ್ದಿ ಹರಡುತ್ತಿದ್ದಂತೆ ನಿರೀಕ್ಷೆಗೂ ಮೀರಿ ಇಳಿದು ಸೆನ್ಸೆಕ್ಸ್ 700ಕ್ಕೂ ಹೆಚ್ಚು ಅಂಕ ಕುಸಿದಿತ್ತು.
ಸರಕಾರದಿಂದ ಈಗ ಬಂದಿರುವ ಸ್ಪಷ್ಟನೆ ಪರಿಣಾಮ , ಸೋಮವಾರ ಮಾರುಕಟ್ಟೆಯಲ್ಲಿ ಮತ್ತೆ ತೇಜಿ ಕಂಡು ಬರುವ ಲಕ್ಷಣಗಳಿವೆ.

 

 

× Subscribe us