News @ your fingertips
News @ your fingertips
ಲಕ್ನೋ ಸೂಪರ್ಜೈಂಟ್ಸ್ನ ನಾಯಕ ಕೆ.ಎಲ್.ರಾಹುಲ್ ನಾಯಕತ್ವದಿಂದ ಕೆಳಗೆ ಇಳಿಯುತ್ತಾರಾ ?
ಹಾಗಂತ ಸುದ್ದಿಗಳು ಕ್ರಿಕೆಟ್ಪಡಶಾಲೆಗಳಲ್ಲಿ ಕೇಳಿಬರುತ್ತಿವೆ.
ಬುಧವಾರ ಹೈದರಾಬಾದ್ನಲ್ಲಿ ಸನ್ರೈಸರ್ಸ್ ವಿರುದ್ದದ ಪಂದ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಬಳಿಕ ಈ ಮಾತುಗಳು ಕೇಳಿ ಬರುತ್ತಿವೆ.
ಪಂದ್ಯದಲ್ಲಿ ಕೆ.ಎಲ್.ರಾಹುಲ್ಅವರ ಪ್ರದರ್ಶನವೂ ನಿರೀಕ್ಷೆ ಮಟ್ಟದಲ್ಲಿರಲಿಲ್ಲ.
ಇಡೀ ತಂಡ 20 ಓವರ್ಗಳಲ್ಲಿ ಕೇವಲ 165 ರನ್ಗಳನ್ನು ಗಳಿಸಲು ಸಾಧ್ಯವಾದರೆ , ರಾಹುಲ್ 33 ಬಾಲ್ಗಳಲ್ಲಿ ಬರೇ 29 ರನ್ ಮಾತ್ರ ಗಳಿಸಿದ್ದರು.
ಹೈದರಾಬಾದ್ ತಂಡ ಈ ಗುರಿಯನ್ನು ಕೇವಲ 9.4 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ ಪೂರ್ಣಗೊಳಿಸಿತು.
ತಂಡದ ಈ ಕಳಪೆ ನಿರ್ವಹಣೆಯಿಂದ ಸಿಟ್ಟಿಗೆದ್ದ ಲಕ್ನೋ ತಂಡದ ಮಾಲಿಕರು ರಾಹುಲ್ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲಗಳಲ್ಲಿ ವೈರಲ್ಆಗಿದೆ.
ಇದಲ್ಲದೆ , ರಾಹುಲ್ ಐಪಿಎಲ್ ಸರಣಿಯುದ್ದಕ್ಕೂ ಹೆಚ್ಚಿನ ಸಾಧನೆಯನ್ನು ತೋರಿಲ್ಲ. ಇದು ಕೂಡಾ ತಂಡದ ಚಿಂತೆಗೆ ಕಾರಣವಾಗಿದೆ.
ರಾಹುಲ್ ಮುಂದಿನ ಎರಡು ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಳ್ಳುತ್ತಾರೋ ಅಥವಾ ಅದನ್ನು ಬಿಟ್ಟು ಕೊಟ್ಟು ತಮ್ಮ ಬ್ಯಾಟಿಂಗ್ ಮೇಲೆ ಗಮನ ಹರಿಸಲು ಮುಂದಾಗುತ್ತಾರೆಯೇ ಎನ್ನುವುದು ಈಗ ಚರ್ಚೆಯಾಗುತ್ತಿರುವ ವಿಷಯ.
ಕೇವಲ 2 ಪಂದ್ಯಗಳು ಉಳಿದಿರುವ ಕಾರಣಕ್ಕೆ ಈ ಹೊತ್ತಿನಲ್ಲಿ ತಂಡದ ಮಾಲಿಕರು ನಾಯಕತ್ವ ಬದಲಾಯಿಸುವ ನಿರ್ಧಾರಕ್ಕೆ ಬರಲಾರರು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿವೆ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ