ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ಗಳಲ್ಲೊಂದಾಗಿರುವ ಕರ್ಣಾಟಕ ಬ್ಯಾಂಕ್ ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 292.40 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 400.33 ಕೋಟಿ ರೂ.ಗಳಷ್ಟಿತ್ತು.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ (ಒಟ್ಟು) 1,77,509.19 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು 1,75,534.89 ಕೋಟಿ ರೂ.ಗಳಷ್ಟಿತ್ತು, ವರ್ಷದಿಂದ ವರ್ಷಕ್ಕೆ ಶೇ.1.12 ಬೆಳವಣಿಗೆಯನ್ನು ದಾಖಲಿಸಿದೆ.
ಈ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಠೇವಣಿಗಳು 1,03,242.17 ಕೋಟಿ ರೂ.ಗಳಷ್ಟಿವೆ. ಹಿಂದಿನ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಇದು 1,00,079.88 ಕೋಟಿ ರೂ.ಗಳು. ವಾರ್ಷಿಕ ಶೇ.3.16ರ ಬೆಳವಣಿಗೆ ಸಾಧಿಸಿದೆ.
ಈಗ ಬ್ಯಾಂಕಿನ ಒಟ್ಟು ಮುಂಗಡಗಳು 74,267.02 ಕೋಟಿ ರೂ.ಗಳಾಗಿದ್ದು , ಹಿಂದಿನ ವರ್ಷದ ತ್ರೈಮಾಸಿಕದಲ್ಲಿ ಇದು 75,455.01 ಕೋಟಿ ರೂ. ಆಗಿತ್ತು.
ಬ್ಯಾಂಕಿನ ಕಾರ್ಯಾಚರಣಾ ಲಾಭವು 467.29 ಕೋಟಿ ರೂ. ಆಗಿದ್ದು, ನಿವ್ವಳ ಬಡ್ಡಿ ಆದಾಯವು 755.60 ಕೋಟಿ ರೂ. ಆಗಿದೆ. ಒಟ್ಟು ಎನ್ಪಿಎ ಹಿಂದಿನ ಸಾಲಿಗೆ ಹೋಲಿಸಿದರೆ ಶೇ. 3.54 ರಿಂದ ಶೇ. 3.46ಕ್ಕೆ ಇಳಿದಿದೆ.
ಬ್ಯಾಂಕಿನ ಬಂಡವಾಳ ಸಮರ್ಪಕ ಅನುಪಾತವು ಈ ತ್ರೈಮಾಸಿಕದ ಅಂತ್ಯದಲ್ಲಿ ಶೇ. 17.64 ರಿಂದ ಶೇ. 20.46ಕ್ಕೆ ಮತ್ತಷ್ಟು ಸುಧಾರಿಸಿದೆ.
ಬ್ಯಾಂಕಿನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಎಸ್ ಬ್ಯಾಂಕಿನ ಫಲಿತಾಂಶವನ್ನು ಪ್ರಕಟಿಸಿ ,
ಈ ಅವಧಿಯಲ್ಲಿ ಬ್ಯಾಂಕ್ ಉನ್ನತ ಮಟ್ಟದಲ್ಲಿ ಮಧ್ಯಮ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಮೂಲಸೌಕರ್ಯ ಮತ್ತು ಪ್ರಕ್ರಿಯೆಗಳ ಅಭಿವೃದ್ಧಿಗಾಗಿ ಬ್ಯಾಂಕ್ ಮಾಡಿದ ಹೂಡಿಕೆಗಳು ಮುಂಬರುವ ತ್ರೈಮಾಸಿಕಗಳಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸಿಲಿವೆ. ಕಡಿಮೆ-ವೆಚ್ಚದ ಠೇವಣಿಗಳನ್ನು ಸುಧಾರಿಸುವುದರ ಜೊತೆಗೆ ಆಯ್ದ ವಿಭಾಗಗಳಲ್ಲಿ ನಮ್ಮ ಗಮನ ಮುಂದುವರಿಯುತ್ತದೆ ಎಂದು ವಿವರಿಸಿದ್ದಾರೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?