7 rupees

News @ your fingertips

ಐದನೇ ಸೆಮಿಕಂಡಕ್ಟರ್ ಘಟಕಕ್ಕೆ ಕೇಂದ್ರ ಅನುಮತಿ

ದೇಶದ ಐದನೇ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಸರಕಾರ ಸೋಮವಾರ ಒಪ್ಪಿಗೆ ನೀಡಿದೆ.
ಗುಜರಾತ್ ಸನಂದ್‌ನಲ್ಲಿ ಕೇನ್ಸ್ ಟೆಕ್ನಾಲಜಿ ಸ್ಥಾಪಿಸಲು ಯೋಜಿಸಿರುವ ಘಟಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೊದನೆ ನೀಡಿದೆ.
3307 ಕೋ.ರೂ ವೆಚ್ಚದ ಈ ಯೋಜನೆ ಸೆಮಿಕಂಡಕ್ಟರ್ ಉತ್ಪಾದನೆ , ಪರೀಕ್ಷೆ , ಜೋಡಣೆ ಹಾಗೂ ಪ್ಯಾಕಿಂಗ್ ಸವಲತ್ತುಗಳನ್ನು ಹೊಂದಲಿದೆ. ದಿನಕ್ಕೆ 6.3 ಮಿಲಿಯನ್ ಚಿಪ್‌ಗಳನ್ನು ತಯಾರಿಸುವ ಸಾಮಾರ್ಥ್ಯವನ್ನು ಘಟಕ ಹೊಂದಿಲಿದೆ.
ಸುಮಾರು 47 ಎಕರೆ ಜಮೀನಿನಲ್ಲಿ ನಿರ್ಮಾಣಗೊಳ್ಳಲಿರುವ ಈ ಘಟಕದಲ್ಲಿ ರೈಲು ,ಆಟೋಮೊಬೈಲ್, ಗೃಹೋಪಯೋಗಿ ಪರಿಕರಗಳಿಗೆ ಬೇಕಾಗುವ ವಿದ್ಯುತ್ ಸಂಬಂಧಿ ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುವುದು.
ಭಾರತದಲ್ಲಿ 76000 ಕೋ. ರೂ.ಗಳ ಇಂಡಿಯ ಸೆಮಿಕಂಡ್ಟಕರ್ ಮಿಷನ್‌ದಡಿ ಆರಂಭಗೊಳ್ಳಲಿರುವ 5ನೇ ಸೆಮಿಕಂಡಕ್ಟರ್ ಘಟಕ ಇದಾಗಿದೆ. ಈಗಾಗಲೇ ಮೈಕ್ರಾನ್ , ಟಾಟಾ, ಸಿಜಿ ಪವರ್ ಘಟಕಗಳು ಈಗಾಗಲೇ ಗುಜರಾತ್‌ನಲ್ಲಿ ಕಾರ್ಯ ಆರಂಭಿಸಿವೆ. ಟಾಟಾ ಸಮೂಹ ಅಸ್ಸಾಂನಲ್ಲಿ ಆರಂಭಿಸಲು ಯೋಜಿಸಿರುವ ಇನ್ನೊಂದು ಘಟಕಕ್ಕೆ ಇತ್ತೀಚಿಗಷ್ಟೇ ಅನುಮತಿ ದೊರಕಿದೆ.

× Subscribe us