News @ your fingertips
News @ your fingertips
ಭಾರತದ ಮಾಹಿತಿ ತಂತ್ರಜ್ಞಾನ ಅಗ್ರಗಣ್ಯ ಕಂಪೆನಿಗಳಾದ ಟಿಸಿಎಸ್,ಇನ್ಫೋಸಿಸ್, ವಿಪ್ರೋ ಕಳೆದೊಂದು ವರ್ಷದಲ್ಲಿ ಸುಮಾರು ೬೩೭೫೯ಉದ್ಯೋಗಿಗಳನ್ನು ಕಳೆದುಕೊಂಡಿದೆ.
ಕಳೆದ ೨೦ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗಿಗಳ ಇಳಿಕೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಕಳೆದ ಅರ್ಥಿಕ ವರ್ಷದಲ್ಲಿ ವಿಪ್ರೋನಲ್ಲಿ ೨೪೫೧೬ ಉದ್ಯೋಗಿಗಳು ಕಡಿಮೆಯಾದರೆ, ಟಿಸಿಎಸ್‌ನಲ್ಲಿ ೧೩೨೪೯,ಇನ್ಫೋಸಿಸ್‌ನಲ್ಲಿ ೨೫೯೯೪ ಉದ್ಯೋಗಿಗಳು ಕೆಲಸ ಬಿಟ್ಟಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅರ್ಥಿಕ ಹಿಂಜರಿಕೆ, ಮುಖ್ಯವಾಗಿ ಐಟಿ ಕ್ಷೇತ್ರದ ದೊಡ್ಡ ಮಾರುಕಟ್ಟೆಯೆನಿಸಿರುವ ಅಮೆರಿಕಾ ಹಾಗೂ ಯುರೋಪ್ ದೇಶಗಳಿಂದ ಬೇಡಿಕೆ ಕುಸಿದಿರುವುದು.ವಿಶ್ವ ಮಟ್ಟದಲ್ಲಿ ಆಗಾಗ ಕಂಡು ಬರುತ್ತಿರುವ ಸಂಘರ್ಷದ ವಾತಾವರಣ ಪ್ರಮುಖ ಕಾರಣಗಳಾದರೆ,ಇತ್ತೀಚಿನ ವರ್ಷಗಳಲ್ಲಿ ತಳಮಟ್ಟದ ಹುದ್ದೆಗಳಿಗೆ ನೇಮಕಾತಿಯೂ ನಿಧಾನವಾಗಿದೆ. ಜೊತೆಯಲ್ಲಿ ಕೃತಕ ಬುದ್ದಿಮತ್ತೆ (ಇಐ)ನಂತಹ ಹೊಸ ಮಜಲುಗಳು ತೆರೆದುಕೊಂಡಿರುವುದು ಕೂಡಾ ಉದ್ಯೋಗಿಗಳ ಕುಂಠಿತಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ತಜ್ಞರು.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ