7 rupees

News @ your fingertips

ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಗೊಂದಲ ಕೊನೆ ನಿರೀಕ್ಷೆ, ಸಿಬಂದಿ ವಜಾ ಅದೇಶ ಹಿಂಪಡೆದ ಸಂಸ್ಥೆ

ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಬುಧವಾರ ವಜಾ ಮಾಡಿದ್ದ 25 ಸಿಬಂದಿಗಳನ್ನು ಮತ್ತೆ ಕರ್ತವ್ಯಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ನೀಡಿದೆ.
ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಸಿಬಂದಿಗಳ ನಡುವಿನ ಮನಸ್ತಾಪವನ್ನು ಕೊನೆಗಾಣಿಸಲು ಮಧ್ಯೆ ಪ್ರವೇಶಿಸಿರುವ ಕಾರ್ಮಿಕ ಇಲಾಖೆ , ಸಂಸ್ಥೆಯ ಅಡಳಿತ ಮಂಡಳಿ ತಕ್ಷಣ ಉದ್ಯೋಗಿಗಳ ಅಹವಾಲುಗಳನ್ನು ಅಲಿಸಬೇಕೆಂದು ಸೂಚನೆ ನೀಡಿದೆ. ಜೊತೆಯಲ್ಲಿ ಎಲ್ಲ ಸಿಬಂದಿಗಳನ್ನು ಮತ್ತೆ ಕರ್ತವ್ಯಕ್ಕೆ ಸೇರಿಕೊಳ್ಳಲು ನಿರ್ದೇಶನ ನೀಡಿದೆ.
ದ್ವಾರಕಾದಲ್ಲಿನ ಮುಖ್ಯಕಚೇರಿಯಲ್ಲಿ ಮುಖ್ಯ ಕಾರ್ಮಿಕ ಆಯುಕ್ತರನ್ನು ಭೇಟಿ ಮಾಡಿದ ಸಂಸ್ಥೆ ಪ್ರತಿನಿಧಿಗಳು, ಉದ್ಯೋಗಿ ಯೂನಿಯನ್ ಪ್ರತಿನಿಧಿಗಳು ಗೊಂದಲಗಳನ್ನು ನಿವಾರಿಸುವ ಪ್ರಯತ್ನ ನಡೆಸಿದರು.
ಇದರ ಪರಿಣಾಮ ಎಲ್ಲ ಸಿಬಂದಿಗಳು ತಕ್ಷಣದಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸಂಸ್ಥೆ ಸೂಚನೆ ನೀಡಿದೆ.
ಕರ್ತವ್ಯಕ್ಕೆ ಹಾಜರಾಗದ 25 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.
ಕಳೆದ ಮಂಗಳವಾರ ರಾತ್ರಿಯಿಂದ ಸುಮಾರು 300 ಕ್ಯಾಬಿನ್ ಸಿಬಂದಿಗಳು ಅನಾರೋಗ್ಯ ಕಾರಣ ನೀಡಿ ಏಕಾಏಕಿ ಕೆಲಸಕ್ಕೆ ಗೈರು ಹಾಜರಾಗಿದ್ದರು. ಅಡಳಿತ ಮಂಡಳಿ ಜೊತೆಗಿನ ಮನಸ್ತಾಪವೇ ಇದಕ್ಕೆ ಕಾರಣವೆನ್ನಲಾಗಿದೆ.
ಇದರ ಪರಿಣಾಮ ಸುಮಾರು 90 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ರಜಾ ಹಾಕಿರುವ ಎಲ್ಲ ಸಿಬಂದಿಗಳಿಗೆ ಗುರುವಾರ ಸಂಜೆ 4 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಏರ್‌ಇಂಡಿಯಾಎಕ್ಸ್‌ಪ್ರೆಸ್ ಸೂಚನೆ ನೀಡಿತ್ತು.
ಗುರುವಾರ ಕೂಡಾ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ 85 ವಿಮಾನದಲ್ಲಿ ವ್ಯತ್ಯಯ ಉಂಟಾಗಿತ್ತು.ಗುರುವಾರ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಎಐಎಕ್ಸ್ ಕನೆಕ್ಟ್ ಜೊತೆಯಾಗಿ 283 ವಿಮಾನಗಳ ಹಾರಾಟ ನಡೆಸಿವೆ.

× Subscribe us