7 rupees

News @ your fingertips

ಏರ್ ಇಂಡಿಯಾ ಪೈಲಟ್‌ಗಳ ಹುಡುಕಾಟ

ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬೆನ್ನಲ್ಲೇ , ಏರ್ ಇಂಡಿಯಾ ಗ್ರೂಪ್, ಏರ್‌ಬಸ್
ಎ320ನಲ್ಲಿ ಕಾರ್ಯನಿರ್ವಹಿಸಲು ಆರ್ಹ ಪೈಲಟ್‌ಗಳ ಹುಡುಕಾಟಕ್ಕೆ ಮುಂದಾಗಿದೆ.
ಕನಿಷ್ಠ 100 ಗಂಟೆಗಳ ಅನುಭವ ಹೊಂದಿರುವ ಎ320 ಪೈಲಟ್‌ಗಳಿಂದ (ಕ್ಯಾಪ್ಟನ್ ಆಗಲು ಅರ್ಹತೆ ಹೊಂದಿರುವ ಪೈಲಟ್) ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಏರ್ ಇಂಡಿಯಾ ಗ್ರೂಪ್ ಹೇಳಿದೆ.
ಇದು ಭಾರತದ ವಾಯುಯಾನ ಮಾರುಕಟ್ಟೆಯಲ್ಲಿ ಕಾಕ್‌ಪಿಟ್ ಪ್ರತಿಭೆಗಳಿಗೆ ದೊಡ್ಡ ಅವಕಾಶವನ್ನು ತೆರೆದಿದೆ.
ಏರ್‌ಬಸ್ ಎ320ಗಳಿಗೆ ರೇಟಿಂಗ್ ಪಡೆದ ಪೈಲಟ್‌ಗಳ ತಕ್ಷಣದ ನೇಮಕಾತಿಯನ್ನು ಮಾಡಾಲಗುವುದು ಎಂದು
ಏರ್ ಇಂಡಿಯಾ ಇಂದು ಘೋಷಿಸಿದೆ
ಹೊಸ ಮಾನದಂಡಗಳನ್ನು ಇಂಡಿಗೋಗೆ ಕೇಂದ್ರ ಸರಕಾರ ಸಡಿಲಿಸಿದ ಬಳಿಕ ಏರ್ ಇಂಡಿಯಾ ಪೈಲಟ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ.

 

.