7 rupees

News @ your fingertips

ಇಂಡಿಗೋ -ಟರ್ಕಿಸ್ ಏರ್‌ಲೈನ್ಸ್ ಗೆ 3 ತಿಂಗಳ ಅವಕಾಶ

ಇಂಡಿಗೋ ಏರ್‌ಲೈನ್ಸ್ ಅಂತಾರಾಷ್ಟ್ರೀಯ ಹಾರಾಟಕ್ಕಾಗಿ ಟರ್ಕಿಸ್ ಏರ್‌ಲೈನ್ಸ್ ಜೊತೆಗೆ ಬಜೆಟ್ ಏರ್‌ಕ್ರಾಫ್ಟ್ ಸಂಬಂಧ ಮಾಡಿಕೊಂಡಿರುವ ಪಾಲುಗಾರಿಕೆಯನ್ನು ಇನ್ನೂ ಮೂರು ತಿಂಗಳು ಮುಂದುವರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಒಪ್ಪಿಗೆ ನೀಡಿದೆ.
ಇಂಡಿಗೋ ಏರ್‌ಲೈನ್ಸ್ ಟರ್ಕಿ ಏರ್‌ಲೈನ್ಸ್‌ನಿಂದ ಅಂತಾರಾಷ್ಟ್ರೀಯ ಹಾರಾಟಕ್ಕಾಗಿ ಎರಡು ಬೋಯಿಂಗ್ 777 ವಿಮಾನಗಳನ್ನು ಲೀಸ್ ಆಧಾರದಲ್ಲಿ ಪಡೆದುಕೊಂಡಿತ್ತು . ಈ ವಿಮಾನಗಳ ಹಾರಾಟಕ್ಕೆ ನೀಡಿರುವ ಪರವಾನಿಗೆ ಅವಧಿ ಮುಗಿದಿರುವ ಕಾರಣ , ಪ್ರಯಾಣಿಕರಿಗೆ ಸಮಸ್ಯಯಾಗದಂತೆ ಅನುಮತಿಯನ್ನು ಮತ್ತೆ ಆರು ತಿಂಗಳ ಕಾಲ ವಿಸ್ತರಿಸುವಂತೆ ಇಂಡಿಗೋ ಏರ್‌ಲೈನ್ಸ್ ನಿರ್ದೇಶನಾಲಯವನ್ನು ಕೇಳಿಕೊಂಡಿತ್ತು.
ಈ ಪ್ರಸ್ತಾವಕ್ಕೆ ಅನುಮತಿ ನೀಡಲು ನಿರಾಕರಿಸಿರುವ ನಿರ್ದೇಶನಾಲಯ ಮೂರು ತಿಂಗಳಿಗಷ್ಟೇ ಅವಕಾಶವನ್ನು ನೀಡಿದೆ.
ಇದರ ಪ್ರಕಾರ ಇಂಡಿಗೋ ಏರ್‌ಲೆನ್ಸ್ 500 ಪ್ರಯಾಣಿಕರ ಬೋಯಿಂಗ್ 777 ಟರ್ಕಿಸ್ ಏರ್‌ಲೈನ್ಸ್ ವಿಮಾನಗಳನ್ನು ಬರುವ ಆಗಸ್ಟ್31ವರಗೆ ಬಳಸಿಕೊಳ್ಳಲು ಅವಕಾಶವಿದೆ.