News @ your fingertips
News @ your fingertips
ಷೇರು ಮಾರುಕಟ್ಟೆಯಲ್ಲಿ ಪ್ರತಿ ದಿನ ಕ್ಯಾಶ್ ವಿಭಾಗದಲ್ಲಿ ಇಂಟ್ರಾಡೇ ಟ್ರೇಡಿಂಗ್ ಮಾಡುವ 10 ಮಂದಿಯಲ್ಲಿ 7 ಮಂದಿ ನಷ್ಟದಲ್ಲಿ ತಮ್ಮ ವಹಿವಾಟು ಮುಗಿಸುತ್ತಾರೆ ಎನ್ನುವ ಅಂಶ ಸೆಬಿ ನಡೆಸಿದ ಅಧ್ಯಯನದಲ್ಲಿ ವ್ಯಕ್ತವಾಗಿದೆ.
ಸೆಬಿಯ ಇಕನಾವಿಕ್ಸ್ ಅ್ಯಂಡ್ ಪಾಲಿಸಿ ಅನಾಲಿಸಿಸ್ ವಿಭಾಗ 2019 , 2022 ಹಾಗೂ 2023ನೇ ಸಾಲಿನ ಷೇರು ಮಾರಕಟ್ಟೆಯ ವಹಿವಾಟುಗಳನ್ನು ವಿಶ್ಲೇಷಿಸಿ ಅಧ್ಯಯನ ವರದಿಯನ್ನು ಪ್ರಕಟಿಸಿದೆ.
ಹೀಗೆ ಇಂಟ್ರಾಡೇ ಟ್ರೇಡ್ ಮಾಡಿ ನಷ್ಟ ಅನುಭವಿಸಿಸುವರಲ್ಲಿ ಹೆಚ್ಚಿನವರು 30 ವರ್ಷದೊಳಗಿನ ಯುವಕರು . 60 ವರ್ಷದ ಮೇಲಿನ ವಯಸ್ಸಿನವರು ಇಂಟ್ರಾಡೇ ವಹಿವಾಟಿನಲ್ಲಿ ಹೊಂದುವ ನಷ್ಟದ ಪ್ರಮಾಣ ಕಡಿಮೆ. ಅದರೆ 20 ವರ್ಷದೊಳಗಿನ ಪ್ರಾಯದ ಟ್ರೇಡರ್‌ಗಳು ದೊಡ್ಡ ಮಟ್ಟದ ನಷ್ಟವನ್ನು ಹೊಂದಿರುವ ಅಂಶ ಕಂಡು ಬಂದಿದೆ.
ದೇಶದ 10 ಪ್ರಮುಖ ಬ್ರೋಕಿಂಗ್ ಸಂಸ್ಥೆಗಳಲ್ಲಿ 2019ರ ವೇಳೆ ಖಾತೆಯ ಹೊಂದಿರುವವರಲ್ಲಿ 15 ಲಕ್ಷ ಹೂಡಿಕೆದಾರರು ಇಂಟ್ರಾಡೇ ಟ್ರೇಡಿಂಗ್ ಮಾಡುತ್ತಿದ್ದರು. 2023ಕ್ಕೆ ಇವರ ಪ್ರಮಾಣ 4.6 ಪಟ್ಟು ಹೆಚ್ಚಾಗಿದ್ದು , 64 ಲಕ್ಷ ಮಂದಿ ಈ ವಹಿವಾಟಿನಲ್ಲಿದ್ದರು.
ಗಮನಾರ್ಹ ವಿಚಾರವೆಂದರೆ , ಇಂಟ್ರಾಡೇ ಟ್ರೇಡಿಂಗ್ ಮಾಡುವ ಮಹಿಳೆಯರ ಪ್ರಮಾಣ ಇಳಿಮುಖವಾಗಿರುವುದು.
2019ರಲ್ಲಿ ಶೇ.20 ಮಹಿಳೆಯರು ಇಂಟ್ರಾಡೇ ವಹಿವಾಟಿನಲ್ಲಿದ್ದರೆ, 2023ಕ್ಕೆ ಅವರ ಪ್ರಮಾಣ ಶೇ16ಕ್ಕೆ ಇಳಿದಿದೆ ಎಂದು ವರದಿ ವಿವರಿಸಿದೆ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ