7 rupees

News @ your fingertips

8ನೇ ವೇತನ ಆಯೋಗ ರಚನೆ

ಕೇಂದ್ರ ಸರಕಾರಿ ನೌಕರರು ಖುಶ್

8ನೇ ಕೇಂದ್ರ ವೇತನ ಆಯೋಗಕ್ಕೆ ಕೇಂದ್ರ ಸರಕಾರ ನೂತನ ಅಧ್ಯಕ್ಷರನ್ನು ನೇಮಿಸುವ ಮೂಲಕ ಆಯೋಗ ಆಸ್ವಿತ್ತಕ್ಕೆ ಬಂದಿದೆ.
ಕಳೆದ ವಾರ ಅಕ್ಟೋಬರ್ 28 ರಂದು ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 8ನೇ ಕೇಂದ್ರ ವೇತನ ಆಯೋಗದ ಉಲ್ಲೇಖ ಹಾಗೂ ನಿಯಮಗಳ ಕುರಿತ ವಿಚಾರಗಳನ್ನು ಅಂತಿಮಗೊಳಿಸಿತು.
ರಕ್ಷಣಾ ಸೇವೆಗಳ ಸಿಬ್ಬಂದಿ ಮತ್ತು ಸುಮಾರು 69 ಲಕ್ಷ ಪಿಂಚಣಿದಾರರು ಸೇರಿದಂತೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರ ವೇತನ ಕುರಿತಂತೆ ಆಯೋಗವು ಶಿಫಾರಸುಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ.
ಜನವರಿ 2025 ರಲ್ಲಿ, ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಸೇರಿತದಂತೆ ಇತರ ನೆರವು ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಕೇಂದ್ರ ಸರ್ಕಾರ 8ನೇ ಕೇಂದ್ರ ವೇತನ ಆಯೋಗ ರಚನೆ ಮಾಡುವುದಾಗಿ ಪ್ರಕಟಿಸಿತ್ತು.
ಹೊಸ ಆಯೋಗ ಅಗತ್ಯವಿದ್ದರೆ, ಶಿಫಾರಸುಗಳನ್ನು ಅಂತಿಮಗೊಳಿಸಿದಾಗ ಮತ್ತು ಯಾವುದೇ ವಿಷಯಗಳ ಕುರಿತು ಮಧ್ಯಂತರ ವರದಿಗಳನ್ನು ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.
8ನೇ ಕೇಂದ್ರ ವೇತನ ಆಯೋಗವು ಅಧ್ಯಕ್ಷರು, ಒಬ್ಬ ಅರೆಕಾಲಿಕ ಸದಸ್ಯರು ಮತ್ತು ಸದಸ್ಯ-ಕಾರ್ಯದರ್ಶಿಗಳನ್ನು ಒಳಗೊಂಡಿರುವ ತಾತ್ಕಾಲಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು 8ನೇ ಕೇಂದ್ರ ವೇತನ ಆಯೋಗದ (ಸಿಪಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪುಲಕ್ ಘೋಷ್ ಅವರನ್ನು ಅರೆಕಾಲಿಕ ಸದಸ್ಯರನ್ನಾಗಿ ನೇಮಿಸಲಾಗಿದ್ದು, ಪಂಕಜ್ ಜೈನ್ ಆಯೋಗದ ಸದಸ್ಯ-ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು.