News @ your fingertips
News @ your fingertips
ಹುಂಡೈ ಮೋಟಾರ್ಸ್ ಇಂಡಿಯಾದ ಐಪಿಒ ಮುಂದಿನ ವಾರ ಮಾರುಕಟ್ಟೆಗೆ ಬರಲಿದೆ.
ಹುಂಡೈ ಮೋಟಾರ್ಸ್ ಕಂಪೆನಿಯ ಭಾರತೀಯ ಅಂಗ ಸಂಸ್ಥೆಯಾಗಿರುವ ಹುಂಡೈ ಮೋಟಾರ್ಸ್ ಇಂಡಿಯಾದ ಐಪಿಒ ಆ15ರಂದು ತೆರೆದುಕೊಳ್ಳಲಿದ್ದು , ಅ.17ಕ್ಕೆ ಕೊನೆಗೊಳ್ಳಲಿದೆ.
ಐಪಿಒಗೆ 1865ರೂ.ಯಿಂದ 1960 ರೂ. ಬ್ಯಾಂಡ್ ದರ ನಿಗದಿಪಡಿಸಲಾಗಿದೆ. ಅ.14ರಂದು ಆ್ಯಂಕರ್ ಸುತ್ತು ಮುಕ್ತಾಯಗೊಳ್ಳಲಿದೆ. ಕಂಪೆನಿಯೂ ಈಗಾಗಲೇ ವಿಶ್ವದ ಸುಮಾರು 100 ಪ್ರಮುಖ ಹೂಡಿಕೆದಾರ ವಿತ್ತೀಯ ಸಂಸ್ಥೆಗಳ ಜೊತೆಯಲ್ಲಿ ಆ್ಯಂಕರ್ ಹೂಡಿಕೆಗಾಗಿ ಮಾತುಕತೆ ನಡೆಸಿದೆ.
ಇದು ಭಾರತೀಯ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಐಪಿಒ ಆಗುವ ಸಾಧ್ಯತೆಗಳಿವೆ. ಹುಂಡೈ ಸಂಸ್ಥೆ 14.22 ಕೋ.ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಿ 27800 ಕೋ. ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.
ವಿಶ್ವದಲ್ಲಿ ಮೂರನೇ ಅತೀ ದೊಡ್ಡ ಕಾರು ಉತ್ಪಾದಕ ಹಾಗೂ ಮಾರಾಟ ಸಂಸ್ಥೆಯಾಗಿರುವ ಹುಂಡೈ ಭಾರತದಲ್ಲಿ ಈಗಾಗಲೇ 13 ಮೊಡೆಲ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದಿಂದ ಅತ್ಯಧಿಕ ಪ್ರಮಾಣದಲ್ಲಿ ಸಂಸ್ಥೆ ಕಾರುಗಳನ್ನು ರಫ್ತು ಮಾಡುತ್ತಿದೆ.
ಸಂಸ್ಥೆ ದೇಶಾದ್ಯಂತ 1,366 ಮಾರಾಟ ಕೇಂದ್ರಗಳನ್ನು ಹಾಗೂ 1,550 ಸರ್ವಿಸ್ ಸೆಂಟರಗಳನ್ನು ಕೂಡಾ ಹೊಂದಿದೆ.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ