7 rupees

News @ your fingertips

ಹೂಡಿಕೆ ಹೆಚ್ಚಿಸುತ್ತಿರುವ ಮ್ಯೂಚುವಲ್ ಫಂಡ್‌ಗಳು


ಭಾರತದ ಷೇರು ಮಾರುಕಟ್ಟೆ ತೀವ್ರ ಏರಿಳಿಕೆ ಗತಿಯಲ್ಲಿರುವಂತೆಯೇ ದೇಶೀಯ ಮ್ಯೂಚುವಲ್ ಫಂಡ್‌ಗಳು ಕಳೆದ ನಾಲ್ಕೈದು ತಿಂಗಳಿಂದ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಖರೀದಿ ಮತ್ತು ಬ್ಲಾಕ್ ಡೀಲ್‌ಗಳಲ್ಲಿ ಆಕ್ರಮಣಕಾರಿ ಕ್ರಮಕ್ಕೆ ಮುಂದಾಗಿವೆ.
ಬಹಳಷ್ಟು ಷೇರುಗಳ ದರ ಕುಸಿದಿರುವುದು ಜೊತೆಯಲ್ಲಿ ಮಾರುಕಟ್ಟೆ ಏರಿಳಿತಗಳನ್ನು ಮ್ಯೂಚುವಲ್ ಫಂಡ್‌ಗಳು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ ಎಂದು ವಿಶ್ಲೇಷಿಸಲಾಗಿದೆ.
ಈ ವರ್ಷ ಇದುವರೆಗಿನ ಟಾಪ್ 20 ದೊಡ್ಡ ಪ್ರಮಾಣ ಖರೀದಿ ಹಾಗೂ ಬ್ಲಾಕ್ ಡೀಲ್‌ಗಳಲ್ಲಿ ನಾಲ್ಕರಲ್ಲಿ ಮ್ಯೂಚುವಲ್ ಫಂಡ್‌ಗಳು ಭಾಗವಹಿಸಿವೆ.
ಪ್ರೈಮ್ ಡೇಟಾಬೇಸ್ ಪ್ರಕಾರ, ಎಸ್‌ಬಿಐ ಮ್ಯೂಚುವಲ್ ಫಂಡ್ 12,303 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಐಸಿಐಸಿಐ ಮ್ಯೂಚುವಲ್ ಫಂಡ್ 4,232 ಕೋಟಿ ರೂ. ಹೂಡಿಕೆ ಮಾಡಿದೆ. ಕೋಟಕ್ ಮ್ಯೂಚುವಲ್ ಫಂಡ್ ಮೋತಿಲಾಲ್ ಓಸ್ವಾಲ್ ಮ್ಯೂಚುವಲ್ ಫಂಡ್ ಕ್ರಮವಾಗಿ 2,578 ಕೋಟಿ ರೂ.ಮತ್ತು 2,156 ಕೋಟಿ ರೂ. ಹೂಡಿಕೆ ಮಾಡಿವೆ.
ಮಾರುಕಟ್ಟೆಯಲ್ಲಿನ ಈಗಿನ ಏರಿಳಿತಗಳು ದೇಶಿ – ವಿದೇಶಿ ಹೂಡಿಕೆ ಸಂಸ್ಥೆಗಳಿಗೆ , ಮ್ಯೂಚುವಲ್ ಫಂಡ್‌ಗಳಿಗೆ ಅಕರ್ಷಕವಾಗಿ ಕಾಣುತ್ತಿದ್ದು , ಗಮನೀಯ ಪ್ರಮಾಣದಲ್ಲಿ ಹೂಡಿಕೆಗೆ ಅವುಗಳು ಮುಂದಾಗುತ್ತಿವೆ.