News @ your fingertips
News @ your fingertips
ಕ್ರಿಕೆಟರ್ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಗಳಿಸಿರಬಹುದು, ಅವರ ಅಭಿಮಾನಿಗಳು ಇಂದು ಕೂಡಾ ಪ್ರತಿ ಎಸೆತಕ್ಕೂ ಸಿಕ್ಸರ್ ನಿರೀಕ್ಷಿಸಬಹುದು. ಆದರೆ ಷೇರು ಮಾರುಕಟ್ಟೆ ಆ ರೀತಿಯಲ್ಲ . ಭಾರತ ವಿಶ್ವದ ಪ್ರಬಲ ನಿಧಿಸಂಗ್ರಹ ಮತ್ತು ಉತ್ತಮ ನಿರ್ವಹಣೆಯನ್ನು ಸಾಧಿಸುತ್ತಿದ್ದರೂ, ಹೂಡಿಕೆದಾರರು ಮಾತ್ರ ಅಸಾಧ್ಯ ನಿರೀಕ್ಷೆಗಳನ್ನು ಹೊಂದಿದ್ದಾರೆ. ಷೇರು ಮಾರುಕಟ್ಟೆಯ ವ್ಯವಸ್ಥೆಯನ್ನು ಜನರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಎಂಡಿ ಹಾಗೂ ಸಿಇಒ ಆಶಿಶ್ ಚೌಹಾಣ್ ಹೇಳಿದ್ದಾರೆ.
ಸೋಮವಾರ ನಡೆದ ಸಿಐಐ ರಾಷ್ಟ್ರೀಯ ಹಣಕಾಸು ಶೃಂಗಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಜಾಗತಿಕ ಏರಿಳಿತಗಳು ಹೆಚ್ಚುತ್ತಿರುವಾಗ ಮತ್ತು ಯುಎಸ್ ಮತ್ತು ಚೀನಾದಲ್ಲಿ ಎಐ-ಚಾಲಿತ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಈ ಪರಿಸ್ಥಿತಿಯಲ್ಲಿಯೂ ಭಾರತದ ಮಾರುಕಟ್ಟೆಗಳು ಸ್ಥಿರವಾಗಿ ಮತ್ತು ಉತ್ತಮವಾಗಿ ಆಡಳಿತ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಕಳೆದ ವರ್ಷ, ನಾವು ಮಾರುಕಟ್ಟೆಗಳ ಮೂಲಕ ಸುಮಾರು 18 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದ್ದೇವೆ, ಇದರಲ್ಲಿ ಈಕ್ವಿಟಿಗಳಲ್ಲಿ 1.69 ಲಕ್ಷ ಕೋಟಿ ರೂ. ಸೇರಿದಂತೆ, ನಮ್ಮನ್ನು ಜಾಗತಿಕವಾಗಿ ಅತಿದೊಡ್ಡ ಐಪಿಒ ಮಾರುಕಟ್ಟೆಯನ್ನಾಗಿ ಮಾಡಿದೆ ಎಂದು ಅವರು ವಿವರಿಸಿದ್ದಾರೆ.
ಭಾರತದ ಜಿಡಿಪಿ-ಕ್ರೆಡಿಟ್ ಅನುಪಾತ 0.66 ರಷ್ಟಿದೆ. ಇದು ಅಮೆರಿಕ ಮತ್ತು ಚೀನಾದಲ್ಲಿ ಕಂಡುಬರುವ ಸುಮಾರು 4 ಕ್ಕಿಂತ ಬಹಳ ಕಡಿಮೆಯಾಗಿದೆ. ಸಾಲ ನೀಡುವುದನ್ನು ನಿರುತ್ಸಾಹಗೊಳಿಸುವ ನೀತಿಗಳನ್ನು ಭಾರತವು ಹೊಂದುವುದಿಲ್ಲ. ಸಾಲ ನೀಡಿಕೆಯನ್ನು ನಿರುತ್ತೇಜನಗೊಳಿಸಿದರೆ ಆರ್ಥಿಕತೆಯು ತೊಂದರೆಗೊಳಗಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಭಾರತದ ಕಾರ್ಪೊರೇಟ್ ಆಡಳಿತ ಆಡಳಿತ ಅಮೆರಿಕಕ್ಕಿಂತ ಹೆಚ್ಚು ಕಠಿಣ ಮತ್ತು ಚೀನಾಕ್ಕಿಂತ 100 ಪಟ್ಟು ಉತ್ತಮವಾಗಿದೆ ಎಂದವರು ಬಣ್ಣಿಸಿದ್ದಾರೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?