7 rupees

News @ your fingertips

ಹಲ್ದಿರಾಮ್ಸ್ ಖರೀದಿಗೆ ಮುಂದಾದ ಬ್ಲಾಕ್‌ಸ್ಟೋನ್

ಅಮೆರಿಕಾ ಮೂಲದ ಖಾಸಗಿ ಈಕ್ವಿಟಿ ಸಂಸ್ಥೆ ಬ್ಲಾಕ್‌ಸ್ಟೋನ್ ಇಂಕ್ ಭಾರತದ ಖ್ಯಾತ ಖಾದ್ಯ ತಯಾರಿಕಾ ಕಂಪೆನಿ ಹಲ್ದ್ದಿರಾಮ್ಸ್ ನಲ್ಲಿ ಶೇ. 51ರಷ್ಟು ಪಾಲು ಖರೀದಿಸಲು ಮುಂದಾಗಿದೆ.
ಬ್ಲಾಕ್‌ಸ್ಟೋನ್ ನೇತೃತ್ವದ ಹೂಡಿಕೆದಾರರ ಸಹಕೂಟ ಹಲ್ದಿರಾಮ್ಸ್‌ನಲ್ಲಿ ಶೇ.51 ಪಾಲನ್ನು 40,000 ಕೋ.ರೂ.ಗಳಿಗೆ ಖರೀದಿಸಲು ಆಸಕ್ತವಾಗಿದೆ.
ಈ ಕುರಿತಂತೆ ಮಾತುಕತೆಗಳು ಅಂತಿಮ ಹಂತದಲ್ಲಿವೆ. ಹಲ್ದಿರಾಮ್ಸ್ ಸಂಸ್ಥೆ ಒಟ್ಟಾರೆ ಮೌಲ್ಯವನ್ನು 70000 -78000 ಕೋ.ರೂ.ಗಳೆಂದು ಅಂದಾಜಿಸಲಾಗಿದೆ. ಪಾಲು ಮಾರಾಟದ ಅಂತಿಮ ಮೌಲ್ಯ ಕುರಿತಂತೆ ಸಂಸ್ಥೆಯ ಪ್ರವರ್ತಕರು ಇನ್ನಷ್ಟೇ ನಿರ್ಧಾರ ಪ್ರಕಟಿಸಬೇಕಿದೆ.
ಒಂದು ವೇಳೆ ಶೇ. 51 ಈಕ್ವಿಟಿಯನ್ನು ಮಾರಾಟ ಮಾಡಿದರೆ ಸಂಸ್ಥೆಯ ನಿಯಂತ್ರಣ ಖಾಸಗಿ ಈಕ್ವಿಟಿ ಸಂಸ್ಥೆ ಬ್ಲಾಕ್‌ಸ್ಟೋನ್ ಪಾಲಾಗಲಿದೆ.
ಹಲ್ದಿರಾಮ್ಸ್‌ನ ರೆಸ್ಟೋರೆಂಟ್‌ಗಳು , ಬ್ರಾಂಡ್ ಲೈಸನ್ಸ್ ಮುಂತಾದ ವಿಚಾರಗಳ ಕುರಿತಂತೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಬಹುತೇಕ ಬ್ರಾಂಡ್ ಹಕ್ಕುಗಳು ಹಾಗೂ ರೆಸ್ಟೋರೆಂಟ್‌ಗಳ ನಿಯಂತ್ರಣವನ್ನು ಹಲ್ದಿರಾಮ್ ಕುಟುಂಬವೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಬ್ಯಾಂಕ್ ಮೂಲಗಳು ವಿವರಿಸಿವೆ.
ಸಂಸ್ಥೆ ಮೌಲ್ಯ , ಹಕ್ಕುಗಳು ಹಾಗೂ ನಿಯಂತ್ರಣ ಕುರಿತ ವಿಚಾರಗಳು ಖರೀದಿಯ ಪ್ರಕ್ರಿಯೆಯನ್ನು ವಿಳಂಬಗೊಳಿಸಿವೆ. ಸದ್ಯದಲ್ಲೇ ಅವೆಲ್ಲವೂ ಇತ್ಯರ್ಥಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಈಕ್ವಿಟಿ ಮಾರಾಟ ಹೊರತಾಗಿ, ಬ್ರಾಂಡ್ ಹೆಸರು ಬಳಕೆಗಾಗಿ ಹಲ್ದಿರಾಮ್ ಕುಟುಂಬ ಹೊಸ ಮಾಲಿಕರಿಂದ ರಾಯಲ್ಟಿಯನ್ನು ಕೂಡಾ ಪಡೆದುಕೊಳ್ಳುವ ಸಾಧ್ಯತೆಗಳಿವೆ.