7 rupees

News @ your fingertips

ಸದ್ಯದಲ್ಲೇ ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಐಪಿಒ

ಭಾರತದ ಅತಿದೊಡ್ಡ ಖಾಸಗಿ ವಲಯದ ವಿತ್ತೀಯ ಸಂಸ್ಥೆ ಎಚ್‌ಡಿಎಫ್‌ಸಿ ಬ್ಯಾಂಕಿನ ಅಂಗಸಂಸ್ಥೆ
ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ಗೆ ಆರಂಭಿಕ ಷೇರು ಹಂಚಿಕೆಗೆ (ಐಪಿಒ )ಅನುಮತಿ ದೊರತಿದೆ.
ಮುಂಬರುವ ಐಪಿಒ ಮೂಲಕ 12,500 ಕೋಟಿ ಬಂಡವಾಳ ಸಂಗ್ರಹಿಸಲು ಸೆಬಿ ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್‌ಗೆ ಅನುಮೋದನೆ ನೀಡಿದೆ.
ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನಲ್ಲಿ ಶೇ. 94.6 ರಷ್ಟು ಷೇರುಗಳನ್ನು ಹೊಂದಿರುವ ಮಾತೃ ಸಂಸ್ಥೆ ಎಚ್‌ಡಿಎಫ್‌ಸಿ ಬ್ಯಾಂಕ್ 10,000 ಕೋಟಿ ಮೌಲ್ಯದ ಷೇರುಗಳನ್ನು ಒಎಫ್‌ಸಿ ಮೂಲಕ ಐಪಿಒ ಭಾಗವಾಗಿ ಮಾರಾಟ ಮಾಡಲಿದೆ. ಕಳೆದ ಆರು ವರ್ಷಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಮೂಹದ ಮೊದಲ ಐಪಿಒ ಇದಾಗಿದೆ.
ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್‌ನ ಹಾಲಿ ಷೇರುದಾರರು ತಮ್ಮ ಪಾಲಿನ ಕೆಲ ಭಾಗವನ್ನು ಈ ಐಪಿಒನಲ್ಲಿ ಮಾರಾಟ ಮಾಡಲಿದ್ದಾರೆ. ಅದರೆ ಅದರ ನಿರ್ದಿಷ್ಟ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಿಲ್ಲ .
ಮುಂಬರುವ ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಐಪಿಒ ಹೊಸ ಇಶ್ಯು ಹಾಗೂ ಒಎಫ್‌ಸಿ ಒಳಗೊಂಡಿದೆ. 2500 ಕೋಟಿ ಮೌಲ್ಯದ ಹೊಸ ಇಶ್ಯು ಇರಲಿದ್ದು , 10000 ಕೋಟಿ ಮೌಲ್ಯದ ಷೇರುಗಳನ್ನು ಒಎಫ್‌ಸಿ ಮೂಲಕ ವಿತರಿಸಲಾಗುತ್ತಿದೆ. 10 ರೂ. ಮುಖಬೆಲೆಯ ಒಟ್ಟು 12500 ಕೋಟಿ ಮೌಲ್ಯದ ಷೇರುಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಷೇರು ಬೆಲೆ ಹಾಗೂ ಇನ್ನಿತರ ವಿವರಗಳನ್ನು ಸದ್ಯದಲ್ಲೇ ನಿರ್ಧರಿಸಲಾಗುತ್ತದೆ ಎಂದು ವಿವರಿಸಲಾಗಿದೆ.
2007 ರಲ್ಲಿ ಆರಂಭಗೊಂಡ ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಭಾರತದಾದ್ಯಂತ 1,680 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಸಂಸ್ಥೆ ಜೂನ್ ತಿಂಗಳ ತ್ರೈಮಾಸಿಕಕ್ಕೆ ಸುಮಾರು 13,300 ಕೋಟಿ ನಿವ್ವಳ ಮೌಲ್ಯ ಹೊಂದಲಿದೆ.