ಕಳೆದ ಹಲವು ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿತ ಕಂಡು ಬಂದಿದೆ. ಇದಕ್ಕೂ ನಮ್ಮ ಮಹಾ ಚುನಾವಣೆಗೂ ಏನಾದರೂ ಸಂಬಂಧವಿದೆಯೇ ?
೨೦೨೪ರ ಲೋಕಸಭಾ ಚುನಾವಣೆ
ಬಿಜೆಪಿ ಬಿಜೆಪಿ ಗೆಲ್ಲದಿದ್ರೆ …
ಷೇರು ಮಾರುಕಟ್ಟೆಯಲ್ಲಿ ತಲ್ಲಣವಾಗಲಿದೆಯೇ ?
ಕೆಲ ಸಮಯದ ಹಿಂದೆ ,
ಹೀಗೊಂದು ಗುಲ್ಲನ್ನು ವ್ಯವಸ್ಥಿತವಾಗಿ ಹರಡಲಾಗಿತ್ತು.
ಅದರೆ ಈಗ ಅದೆಲ್ಲ ಮುಗಿದ ಕಥೆ.
ಮುಖ್ಯವಾಗಿ ವಿದೇಶಿ ಹೂಡಿಕೆದಾರ ಸಂಸ್ಥೆಗಳು,ಜೊತೆಯಲ್ಲಿ ಕೆಲ ಸ್ವದೇಶಿ ಸಂಸ್ಥೆಗಳು ಜೊತೆಗೂಡಿ ರೂಪಿಸಿದ ನರೆಟೀವ್ ಇದು.
ಚುನಾವಣೆಗೂ ಷೇರು ಮಾರುಕಟ್ಟೆಗೂ ಸಂಬಂಧವಿರುವುದು ನಿಜ. ಆದರೆ ಇಂತಹ ಪರಿಸ್ಥಿತಿಗಳನ್ನು ಕಲವೊಮ್ಮೆ ಕೆಲವು ಹಿತಾಸಕ್ತಿಗಳು ತಮ್ಮ ತಂತ್ರಗಾರಿಕೆ ಭಾಗವಾಗಿ ಬಳಸಿ ಲಾಭ ಗಳಿಸಿ, ಸಣ್ಣ ಹೂಡಿಕೆದಾರರನ್ನು ಪೇಚಿಗೆ ಸಿಲುಕಿಸುವ ಸಂದರ್ಭಗಳಿರುತ್ತವೆ. ಇಂತಹ ಊಹಾಪೋಹಗಳಿಗೆ ಸಿಲುಕಿ ನಷ್ಟ ಮಾಡಿಕೊಳ್ಳುವವರು ಕೇವಲ ಸಣ್ಣ ಹೂಡಿಕೆದಾರರು ಮಾತ್ರ.
ಲೋಕಸಭಾ ಚುನಾವಣಾ ಫಲಿತಾಂಶ, ಬಳಿಕ ಕೇಂದ್ರ ಸರಕಾರ ರೂಪಿಸುವ ನೀತಿ – ನಿಯಮಗಳು, ಅಭಿವೃದ್ದಿ ಯೋಜನೆಗಳಿಗೆ ಸಹಜವಾಗಿ ಮಾರುಕಟ್ಟೆ ಪ್ರತಿಕ್ರಿಯಿಸುತ್ತದೆ. ಅಂತಹ ಪರಿಣಾಮಗಳು ದೀರ್ಘಕಾಲಿಕವಂತೂ ಅಲ್ಲವೇ ಅಲ್ಲ.
ಅದರೆ ಚುನಾವಣೆಗೆ ಇನ್ನೂ ೬ ತಿಂಗಳಿಗಳಿರುವಾಗಲೇ ಇಂತಹ ಗೊಂದಲಗಳನ್ನು ಸೃಷ್ಟಿಸುವ ಕೆಲಸ ನಡೆದಿತ್ತು. ಎಷ್ಟರ ಮಟ್ಟಿಗೆ ಅಂದರೆ , ಒಂದು ವಿತ್ತೀಯ ಸಂಸ್ಥೆ ನೀಡಿದ ಹೇಳಿಕೆ ಪ್ರಕಾರ ,‘ ಕೇಂದ್ರದಲ್ಲಿ ಬಿಜೆಪಿ ಬಹುಮತ ಗಳಿಸದಿದ್ದರೆ , ಶೇ.೨೦ರಷ್ಟು ಮಾರುಕಟ್ಟೆ ಬೀಳುವ ಸಾಧ್ಯತೆಗಳಿವೆ.’
ಇದು ಕೇಂದ್ರ ಸರಕಾರದ ವಿರುದ್ದ ಹಾಗೂ ಪರೋಕ್ಷವಾಗಿ ಬಿಜೆಪಿ ವಿರುದ್ದ ನಡೆದ ತಂತ್ರಗಾರಿಕೆಯ ಒಂದು ಭಾಗ.
ಆ ಸಂದರ್ಭದಲ್ಲಿ ಕೆಲವು ವಿತ್ತೀಯ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಸಿ,ಕೆಲವು ದಿನಗಳ ಕಾಲ ತೋರಿದ ‘ಸೇಲ್‌ಔಟ್ ’ ಪ್ರವೃತ್ತಿ ಕೂಡಾ ಹೂಡಿಕೆದಾರರಿಗೆ ಅಪಾಯದ ಸೂಚನೆ ನೀಡುವುದಾಗಿತ್ತು.
ಚುನಾವಣೆ ಫೋಷಣೆಯಾಗಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಬರುತ್ತದೆ ಎನ್ನುವ ಅಶಾಭಾವ ಮೂಡುತ್ತಿದ್ದಂತೆ ಮಾರುಕಟ್ಟೆ ನೆಗಟಿವ್ ಪ್ರತಿಕ್ರಿಯೆಯನ್ನು ನಿಲ್ಲಿಸಿತು. ಮತ್ತೆ ಏರುಗತಿ ಆರಂಭವಾಯಿತು.
ಮಾರುಕಟ್ಟೆ ನಿರೀಕ್ಷೆಗಿಂತ ಹೆಚ್ಚು ಗಳಿಕೆಯಲ್ಲಿರುವಾಗ ಅಗಾಗ ಸಣ್ಣ ಸಣ್ಣ ಮಾರಾಟ ಪ್ರವೃತ್ತಿ ಕಂಡು ಬರುವುದು ಸಾಮಾನ್ಯ. ಅದು ಮಾರುಕಟ್ಟೆಯ ಸಹಜ ಪ್ರಕ್ರಿಯೆ ಕೂಡಾ.
ವಿಶ್ವದ ಅನೇಕ ಕಡೆ ಮುಖ್ಯವಾಗಿ ಅಮೆರಿಕಾ ರಾಷ್ಟ್ರಗಳಲ್ಲಿ ಅರ್ಥಿಕ ಹಿಂಜರಿಕೆ ಇರುವ ಕಾರಣ ಅಲ್ಲಿ ಮಾರುಕಟ್ಟೆಗಳು ನೇರವಾಗಿ ಇಲ್ಲಿಯೂ ಪರಿಣಾಮವನ್ನು ಬೀರುತ್ತವೆ. ಆದರೆ ಭಾರತದಲ್ಲಿ ಅರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು , ಕೈಗಾರಿಕಾ ಉತ್ಪಾದನೆ ಪ್ರಮಾಣವೂ ಗಳಿಕೆ ಹಾದಿಯಲ್ಲಿದೆ. ಹಾಗಾಗಿ ಭಾರತದ ಭವಿಷ್ಯದ ಮಾರುಕಟ್ಟೆ ಸದೃಢವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಯುದ್ದ ಭೀತಿ , ಹವಾಮಾನ ವೈಪರೀತ್ಯಗಳು , ಗಲಭೆಗಳು ಮುಂತಾದ ವಿಶ್ವ ವಿದ್ಯಮಾನಗಳು ಮಾರುಕಟ್ಟೆಯಲ್ಲಿ ಅಸ್ಥಿರತೆ ರೂಪಿದರೂ ಅದನ್ನು ತಕ್ಷಣದಲ್ಲಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಭಾರತೀಯ ಮಾರುಕಟ್ಟೆಗಿದೆ.
ಮತ್ತೆ ಬಿಜೆಪಿ ಸರಕಾರವೇ ಅಧಿಕಾರ ಹಿಡಿದರೆ , ಈಗಾಗಲೇ ಯೋಜಿಸಲಾಗಿರುವ ಯೋಜನೆಗಳಿಗೆ ಮತ್ತಷ್ಟು ವೇಗ ಸಿಗಲಿದೆ. ಜೊತೆಯಲ್ಲಿ ಮೂಲಭೂತ ಸವಲತ್ತುಗಳಿಗೆ ಸಂಬಂಧಿಸಿದಂತೆ ಹಲವಾರು ಹೊಸ ಕಾರ್ಯಗಳು ಆರಂಭಗೊಳ್ಳುವ ಸಾಧ್ಯತೆ ಇದೆ ಎನ್ನುವುದನ್ನು ಮಾರುಕಟ್ಟೆ ನಂಬಿದೆ.
ವಿಶ್ವವ್ಯಾಪಿಯಾಗಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಸಾಧನೆಯನ್ನು ತೋರುತ್ತಿಲ್ಲ . ಇದ್ದುದರಲ್ಲಿ ಮೂಲಭೂತ ಸೌಕರ್ಯ, ಔಷಧಿ ರಂಗ,ಆಟೋ ಮೊಬೈಲ್, ಇಂಧನ ಮುಂತಾದ ಕಂಪೆನಿಗಳು ಮುಂದಿನ ದಿನಗಳಲ್ಲಿ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿವೆ. ಜೊತೆಯಲ್ಲಿ ಬ್ಯಾಂಕಿಂಗ್‌ರಂಗ ಅತೀ ವೇಗವಾಗಿ ಬೆಳೆಯುತ್ತಿದೆ. ಇಂತಹ ಕಂಪೆನಿಗಳೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಂಬಿಕೆಯನು ಮತ್ತಷ್ಟು ್ನ ಗಟ್ಟಿ ಮಾಡುತ್ತಿವೆ.
ದೀರ್ಘಕಾಲಿಕ ಹೂಡಿಕೆದಾರರ ಯಾವುದೇ ಸುದ್ದಿ , ಘಟನೆಗಳಿಗೆ ಚಿಂತಿಸಬೇಕಿಲ್ಲ , ಬರುವ ದೀಪಾವಳಿ ಹೊತ್ತಿಗೆ ಭಾರತ ಮಾರುಕಟ್ಟೆ ಹೊಸ ಮೈಲಿಗಲ್ಲಗಳನ್ನು ದಾಟಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ರಿಟೈಲ್ ಹೂಡಿಕೆದಾರರು , ಮುಖ್ಯವಾಗಿ ಸಣ್ಣ ಹೂಡಿಕೆದಾರರು ಸದ್ಯಕ್ಕಂತೂ ಕಾಯುವುದು ಉತ್ತಮ.
ಭಾರತ ಮಾರುಕಟ್ಟೆ ಬಗ್ಗೆ ಸದಾ ಪಾಸಿಟಿವ್ ಇರಿ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ