7 rupees

News @ your fingertips

ಷೇರು ಮಾರುಕಟ್ಟೆಗೆ ಸದ್ಯ ಏನು ಬೇಕಿದೆ ?

ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಪ್ರಮಾಣ ಹೆಚ್ಚುತ್ತಿದ್ದರೂ,ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ನೊಂದಾಯಿತ ಸಲಹೆಗಾರರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಅದೇ ಇಂದು ನಮ್ಮ ಮಾರುಕಟ್ಟೆ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಎನ್ನುತ್ತಾರೆ ಜೆರೋದಾದ ಸಂಸ್ಥಾಪಕ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿತಿನ್ ಕಾಮತ್.
ಮಾರುಕಟ್ಟೆ ಕುರಿತಂತೆ ‘ಎಕ್ಸ್’ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ನಿತಿನ್ , 2020ರಲ್ಲಿ 3 ಕೋಟಿಯಷ್ಟಿದ್ದ ಹೂಡಿಕೆದಾರರ ಸಂಖ್ಯೆ ಇಂದು 10 ಕೋಟಿ. ಅದರೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ನೊಂದಾಯಿತ ಸಲಹೆಗಾರರು ಇರುವುದು ಕೇವಲ 900 ಮಂದಿ.ಅದರಲ್ಲಿ ಬಹಳಷ್ಟು ಮಂದಿ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ಅವರ ನೋವು .
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿರುವ ಹೂಡಿಕೆದಾರರಿಗೆ ಸಮರ್ಪಕವಾದ ರೀತಿಯಲ್ಲಿ ಮಾರ್ಗದರ್ಶನ ನೀಡಲು ಪರಿಣತ ಸಲಹೆಗಾರರು ನಮ್ಮಲ್ಲಿ ಇಲ್ಲ. ಜೊತೆಯಲ್ಲಿ ನೊಂದಾಯಿತ ಸಲಹೆಗಾರರ ಸಂಖ್ಯೆಯೂ ಕುಸಿಯುತ್ತಿದೆ. ಈ ಸವಾಲನ್ನು ನಾವು ಮೊದಲು ಎದುರಿಸಬೇಕಾಗಿದೆ ಎನ್ನುವ ಸಲಹೆ ಅವರದ್ದು.
ಭಾರತದಲ್ಲಿ ಮ್ಯೂಚುವಲ್ ಫಂಡ್ ವಲಯವೂ ಹಿಂದುಳಿದಿದೆ. ನಾವು ನಿರೀಕ್ಷಿಸಿದಷ್ಟು ಹೂಡಿಕೆ ಅಲ್ಲಿ ಬರುತ್ತಿಲ್ಲ. ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿರುವ ಏಜೆಂಟರ್ ಸಂಖ್ಯೆ 2.7 ಲಕ್ಷ ಮಾತ್ರ. ಅದರೆ ವಿಮಾ ಕ್ಷೇತ್ರ ಗಮನಿಸಿ, ವ್ಯಾಪಕವಾಗಿ ಬೆಳೆದಿದೆ. ಸುಮಾರು 27ಲಕ್ಷ ಏಜೆಂಟರು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಉದಾಹರಿಸಿದ್ದಾರೆ ನಿತಿನ್.

× Subscribe us