News @ your fingertips
News @ your fingertips
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಶರದ್‌ಪವಾರ್ ಲೋಕಸಭೆ ಬಳಿಕ ತಮ್ಮ ಪಕ್ಷವನ್ನು ಬೇರೆ ಪಕ್ಷಗಳೊಂದಿಗೆ ವಿಲೀನಗೊಳಿಸುವ ಸೂಚನೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಶರದ್‌ಪವಾರ್ 2024ರ ಲೋಕಸಭಾ ಚುನಾವಣೆಗಳು ಮುಗಿದ ಬಳಿಕ ಹಲವಾರು ಸಣ್ಣ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಎನ್‌ಸಿಪಿ ಕೂಡಾ ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.
ಎನ್‌ಸಿಪಿ ಕಾಂಗ್ರೆಸ್‌ನೊಂದಿಗೆ ಅಥವಾ ತಮ್ಮ ತತ್ವಗಳನ್ನು ಪಾಲಿಸಲು ಸಿದ್ದವಾದರೆ ಶಿವಸೇನಾ (ಉದ್ಭವ್ ಬಣ)ಯೊಂದಿಗೂ ವಿಲೀನಗೊಳ್ಳಬಹುದು ಎನ್ನುವ ಸೂಚನೆಗಳನ್ನು ಪವಾರ್ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
83 ವರ್ಷದ ಶರದ್ ಪವಾರ್ ಸದ್ಯ ರಾಜಕೀಯವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಶರದ್ ಅವರ ಬಲಗೈ ಬಂಟನಂತಿದ್ದ ಸೋದರಳಿಯ ಅಜಿತ್‌ಪವಾರ್ ಕಳೆದ ವರ್ಷ ಎನ್‌ಸಿಪಿಯನ್ನು ತೊರೆದು , ಬಿಜೆಪಿ- ಶಿವಸೇನಾ ಸಖ್ಯದಲ್ಲಿದ್ದಾರೆ.
ಎನ್‌ಸಿಪಿಯ ಸಂಘಟನೆ,ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಜಿತ್‌ಪವಾರ್ ನೋಡಿಕೊಂಡಿದ್ದರು. ಇದಕ್ಕೆ ಪೂರಕವಾಗಿರುವ ಸಕ್ಕರೆ ಸಹಕಾರಿ ಸಂಘಗಳು,ಬ್ಯಾಂಕ್‌ಗಳ ಸಂಪೂರ್ಣ ವ್ಯವಹಾರ ಅಜಿತ್ ಹತೋಟಿಯಲ್ಲಿತ್ತು. ಅಜಿತ್ ಪಕ್ಷ ತೊರೆದಿರುವುದು ಶರದ್ ಪವಾರ್ ಅವರಿಗೆ ದೊಡ್ಡ ಹೊಡೆತ ನೀಡಿದೆ. ಜೊತೆಯಲ್ಲಿ ಸದ್ಯ ಪಕ್ಷವನ್ನು ಮುನ್ನಡೆಸುವ ಸಮರ್ಥರು ಯಾರೂ ಇಲ್ಲದಂತಾಗಿದೆ. ಈ ಕಾರಣಗಳಿಂದಲೇ ಅವರು ಪಕ್ಷದ ವಿಲೀನ ಮಾತನ್ನಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಎನ್‌ಸಿಪಿ ಹಾಗೂ ಕಾಂಗ್ರೆಸ್ ಉದ್ಭವ್ ಠಾಕ್ರೆಗೆ ಬೆಂಬಲ ನೀಡಿದ್ದರೂ, ಬಳಿಕ ಉಂಟಾದ ಭಿನ್ನಾಭಿಪ್ರಾಯಗಳಿಂದ ಸರಕಾರ ಉರುಳಿತ್ತು. ಲೋಕಸಭಾ ಚುನಾವಣೆ ಪೂರ್ವ ಸೀಟು ಹೊಂದಾಣಿಕೆ ಸಂಬಂಧ ಕೂಡಾ ಈ ಪಕ್ಷಗಳ ನಡುವೆ ಒಮ್ಮತ ಸಾಧ್ಯವಾಗಿರಲಿಲ್ಲ. ಶ್ರೀ ರಾಮ ಮಂದಿರ ನಿರ್ಮಾಣ ಹಾಗೂ ಹಿಂದುತ್ವದ ಬಗ್ಗೆ ಶಿವಸೇನೆ ಹೊಂದಿರುವ ಒಲವು ಎನ್‌ಸಿಪಿಗೆ ಹಿತವಾಗಿಲ್ಲ.ಹಾಗಾಗಿ ಶಿವಸೇನೆಯೊಂದಿಗೆ ಎನ್‌ಸಿಪಿ ವಿಲೀನ ದೂರದ ಮಾತು ಎನ್ನಲಾಗುತ್ತಿದೆ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ