7 rupees

News @ your fingertips

ವೆನಿಜುವೆಲಾದ ಮೇಲೆ ದಾಳಿ

ಅಮೆರಿಕಾ ಶನಿವಾರ ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಿದೆ.
ವೆನೆಜುವೆಲಾ ಮೇಲಿನ ದಾಳಿಯ ಪರಿಣಾಮಗಳು ಇನ್ನೂ ವರದಿಯಾಗಿಲ್ಲವಾದರೂ , ಹಲವೆಡೆ ಭಾರಿ ಪ್ರಮಾಣದ ಸ್ಫೋಟಗಳು ಕೇಳಿಬಂದಿವೆ.
ವಿಮಾನಗಳು ಕ್ಯಾರಕಾಸ್ ಮೇಲೆ ಹಾದುಹೋಗಿದ್ದು, ಅಮೆರಿಕ ನಾಗರಿಕ ಮತ್ತು ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎನ್ನಲಾಗಿದೆ. ರಾಜಧಾನಿ ಬಳಿಯ ಪಟ್ಟಣಗಳಾದ ಹಿಗುರೋಟ್ ಮತ್ತು ಲಾ ಗೈರಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಬ್ಲೂಮ್‌ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಈ ಘಟನೆಗಳು ನಡೆದಿವೆ. ಕನಿಷ್ಠ ಏಳು ಸ್ಫೋಟಗಳು ನಡೆದಿದ್ದು, ಜನರು ಭೀತಿಯಿಂದ ಬೀದಿಗೆ ಧಾವಿಸಿದ್ದಾರೆ. ಸಾವುನೋವುಗಳು ಹಾಗೂ ಅಸ್ತಿ ಹಾನಿಗಳ ಕುರಿತಂತೆ ತಕ್ಷಣಕ್ಕೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ದಾಳಿಯು ಅರ್ಧ ಗಂಟೆಯೊಳಗೆ ಮುಗಿದುಹೋಗಿದೆ.
ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ಹೊರಗೆ ಕಳುಹಿಸಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಅಮೆರಿಕದಲ್ಲಿ ಮಾದಕವಸ್ತು-ಭಯೋತ್ಪಾದನಾ ಆರೋಪ ಎದುರಿಸುತ್ತಿರುವ ಮಡುರೊ ಮೇಲೆ ಟ್ರಂಪ್ ಆಡಳಿತದಿಂದ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಈ ದಾಳಿ ನಡೆದಿದೆ. ತಿಂಗಳುಗಳ ಕಾಲ, ಮಾದಕವಸ್ತುಗಳನ್ನು ಸಾಗಿಸುತ್ತಿದೆ ಎಂದು ಹೇಳಲಾದ ದೋಣಿಗಳ ಮೇಲೆ ಪದೇ ಪದೇ ದಾಳಿ ನಡೆಸಿದ ನಂತರ ವೆನೆಜುವೆಲಾದ ಗುರಿಗಳ ಮೇಲೆ ದಾಳಿ ನಡೆಸಲು ಅಧಿಕಾರ ನೀಡಬಹುದು ಎಂದು ಟ್ರಂಪ್ ಈ ಹಿಂದೆಯೇ ಎಚ್ಚರಿಸಿದ್ದರು.