7 rupees

News @ your fingertips

ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಸತತ ಮಾರಾಟ, ಯಾಕಾಗಿ ?

ಕಳೆದ ಒಂದೆರಡು ವಾರಗಳಿಂದ ವಿದೇಶಿ ವಿತ್ತೀಯ ಸಂಸ್ಥೆಗಳು ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಮಾರಾಟ ಪ್ರವೃತ್ತಿ ತೋರಿವೆ.ಪರಿಣಾಮ ಮಾರುಕಟ್ಟೆಯಲ್ಲಿ ಒಂದು ರೀತಿಯಲ್ಲಿ ನೆಗೆಟಿವ್ ವಾತಾವರಣ ಸೃಷ್ಟಿಗೊಂಡಿದೆ.
ಯಾಕಾಗಿ ಎಫ್‌ಐ ಗಳು ಈ ರೀತಿಯಲ್ಲಿ ಮಾರಾಟದಲ್ಲಿ ತೊಡಗಿವೆ ಎನ್ನುವುದಕ್ಕೆ ಸ್ಪಷ್ಟವಾದ ಕಾರಣಗಳಿಲ್ಲ.
ಲೋಕಸಭೆ ಚುನಾಣಾ ಫಲಿತಾಂಶ ಕುರಿತ ಅನಿಶ್ಚಿತತೆ ಅಥವಾ ಇತರ ದೇಶಗಳಲ್ಲಿ ಅರ್ಥಿಕ ಸಂಕಷ್ಟದಿಂದ ಅಲ್ಲಿನ ಷೇರು ಮಾರುಕಟ್ಟೆ ಕುಸಿದ ಪರಿಣಾಮ ಉದ್ಭವಿಸಿರುವ ಹೊಸ ಹೂಡಿಕೆ ಅವಕಾಶವನ್ನು ಬಳಸುವ ಕಾರಣಕ್ಕೋ … ?
ಬಹಳಷ್ಟು ವಿದೇಶಿ ವಿತ್ತೀಯ ಸಂಸ್ಥೆಗಳು ಮೇ ತಿಂಗಳಲ್ಲಿ ದೊಡ್ಡ ಪ್ರಮಾಣದ ಮಾರಾಟಕ್ಕೆ ಇಳಿದಿರುವುದಂತೂ ನಿಜ.
ವಿದೇಶಿ ಸಂಸ್ಥೆಗಳು ಮಾರಾಟ ಮಾಡುವ ಹೊತ್ತಿನಲ್ಲಿ ದೇಶೀಯ ಸಂಸ್ಥೆಗಳು ಕೂಡಾ ಅಷ್ಟೇ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ.ಹಾಗಾಗಿ ಕುಸಿತ ಕಂಡು ಬಂದರೂ ಮತ್ತೆ ಏರಿಕೆ ಕಂಡು ಬರುತ್ತಿದೆ.
ಸೋಮವಾರ ಬೆಳಗ್ಗೆ ನೆಗಟಿವ್ ಮೂಡ್‌ನಲ್ಲಿದ್ದ ಮಾರುಕಟ್ಟೆ ಸಂಜೆ ಹೊತ್ತಿಗೆ ಸಂಪೂರ್ಣ ಪಾಸಿಟಿವ್‌ಗೆ ತಿರುಗಿತ್ತು. ಸುಮಾರು 650 ಅಂಕ ಸನ್ಸೆಕ್ಸ್ ಕುಸಿದು , ಸಂಜೆ ಹೊತ್ತಿಗೆ 200 ಅಂಕ ಪಾಸಿಟಿವ್‌ಗೆ ಮರಳಿತ್ತು. ಸಾಕಷ್ಟು ಏಳಿರಿತ ಕಂಡಿದ್ದ ಸೋಮವಾರದ ವಹಿವಾಟಿನಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು 4498 ಕೋ.ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಂಸ್ಥೆಗಳು ಖರೀದಿಸಿದ್ದು 3562 ಕೋ.ರೂ.ಗಳ ಷೇರುಗಳನ್ನು.
ಚೀನಾದಲ್ಲೂ ಇತ್ತೀಚಿಗೆ ಅರ್ಥಿಕ ಹಿಂಜರಿಕೆ ಕಂಡು ಬರುತ್ತಿದ್ದು , ಅಲ್ಲಿನ ಷೇರು ಮಾರುಕಟ್ಟೆ ನಿರೀಕ್ಷಿತ ಮಟ್ಟದಲ್ಲಿಲ್ಲ.ಸದ್ಯ ಭಾರತಕ್ಕಿಂತ ಚೀನಾ ಮಾರುಕಟ್ಟೆ ಹೂಡಿಕೆಗೆ ಹೆಚ್ಚು ಅನುಕೂಲಕರ ಎನ್ನುವ ಅಂಶ ವಿದೇಶಿ ವಿತ್ತೀಯ ಸಂಸ್ಥೆಗಳಲ್ಲಿದೆ. ಹಾಗಾಗಿ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ,ಬಿಜೆಪಿ ದೊಡ್ಡ ಮಟ್ಟದಲ್ಲಿ ಬಹುಮತ ಗಳಿಸುತ್ತಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. ಕಳೆದ 4 ಹಂತದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿರುವುದು ಅಂತಕಕ್ಕೆ ಕಾರಣವಾಗಿದೆ. ಬಿಜೆಪಿಗೆ ನಿರೀಕ್ಷೆಯಷ್ಟು ಸ್ಥಾನಗಳು ಗಳಿಸುವುದು ಕಷ್ಟ. ಸರಕಾರ ರಚನೆಗೆ ಇತರರ ನೆರವು ಅಗತ್ಯವಾಗಬಹುದು ಎನ್ನುವ ಅಂದಾಜುಗಳು ಹರಡಿದಾಡುತ್ತಿವೆ.ಇದು ಕೂಡಾ ಮಾರುಕಟ್ಟೆಯ ಏರಳಿತಕ್ಕೂ ಒಂದು ಕಾರಣ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂದರ್ಶನವೊಂದರಲ್ಲಿ ಇದೇ ಮಾತನ್ನು ಅಡಿದ್ದಾರೆ. ಚುನಾವಣೆ ಫಲಿತಾಂಶ ಕುರಿತ ಅತಂಕದಿಂದ ಮಾರುಕಟ್ಟೆ ಏರಿಳಿತ ಕಾಣುತ್ತಿದೆ.ಆದರೆ ಜೂನ್.4ರ ನಂತರ ಮಾತ್ರ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣಲಿದೆ ಎಂದು ಹೇಳಿದ್ದಾರೆ.
ಚುನಾವಣಾ ಫಲಿತಾಂಶ ಬಳಿಕ ಮಾರುಕಟ್ಟೆ ಸಾಕಷ್ಟು ಕರೆಕ್ಷನ್‌ಗೆ ಸಿದ್ದವಾಗಬಹುದು ಎನ್ನುವ ನಿರೀಕ್ಷೆ ಹೂಡಿಕೆದಾರರಲ್ಲಿ ಇತ್ತು. ಆದರೆ ಈಗಾಗಲೇ ಸಾಕಷ್ಟು ಇಳಿಕೆ ಬಂದಿದೆ. ಬಿಜೆಪಿ ನಿರೀಕ್ಷೆಗಿಂತ ಕಡಿಮೆ ಸ್ಥಾನ ಗಳಿಸಿದರೆ, ಮಾತ್ರ ಮತ್ತೆ ಒಂದಿಷ್ಟು ನೆಗಟಿವ್ ಪ್ರತಿಕ್ರಿಯೆ ಬರಬಹುದು ವಿನ: ಸ್ಪಷ್ಟ ಬಹುಮತ ಗಳಿಸಿದರೆ ಏರಿಕೆಯಂತೂ ಖಂಡಿತ.
ಒಂದು ಮಾತು ,
ಭಾರತದ ಮಾರುಕಟ್ಟೆಯ ದೊಡ್ಡ ಮಟ್ಟದ ಗಳಿಕೆ ಇನ್ನೂ ಬಾಕಿ ಇದೆ.

× Subscribe us