7 rupees

News @ your fingertips

ವಾಯುಪಡೆಗೆ ಮಾರ್ಚ್‌ನಲ್ಲಿ ಮತ್ತಷ್ಟು ‘ತೇಜಸ್ ’

ಭಾರತೀಯ ವಾಯುಪಡೆಗೆ 2026 ಮಾರ್ಚ್ ಹೊತ್ತಿಗೆ ಕನಿಷ್ಠ ಅರ್ಧ ಡಜನ್ ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್‌ಗಳು ಲಭ್ಯವಾಗಲಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಿಎಂಡಿ ಡಿ ಕೆ ಸುನಿಲ್ ಹೇಳಿದ್ದಾರೆ,
ಜೆಟ್‌ಗಳ ವಿತರಣೆಯಲ್ಲಿನ ವಿಳಂಬದ ಬಗ್ಗೆ ಭಾರತೀಯ ವಾಯುಪಡೆಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ ಬಗ್ಗೆ ಎಚ್‌ಎಎಲ್‌ನ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ. ಯುಎಸ್ ರಕ್ಷಣಾ ಪ್ರಮುಖರಾದ ಜಿಇ ಏರೋಸ್ಪೇಸ್ ಫೈಟರ್ ಜೆಟ್‌ಗಳಿಗೆ ತನ್ನ ಎಂಜಿನ್‌ಗಳನ್ನು ಪೂರೈಸುವಲ್ಲಿ ತಡ ಮಾಡಿರುವುದು ವಿತರಣಾ ವಿಳಂಬಕ್ಕೆ ಪ್ರಮುಖ ಕಾರಣ ಎಂದು ಅವರು ವಿವರಿಸಿದ್ದಾರೆ.
ಯುಎಸ್ ಸಂಸ್ಥೆಯು ಎಫ್ 404 ಎಂಜಿನ್‌ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಅಸಮರ್ಥತವಾದ ಕಾರಣಕ್ಕೆ ವಿತರಣೆಯಲ್ಲಿ ವಿಳಂಬ ಉಂಟಾಗಿದೆ . ಬೇರಾವುದೇ ಕಾರಣದಿಂದ ಸಮಸ್ಯೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲಿ ಮಾತನಾಡಿರುವ ಎಚ್‌ಎಎಲ್ ಮುಖ್ಯಸ್ಥರು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಇ ಏರೋಸ್ಪೇಸ್ 12 ಎಂಜಿನ್‌ಗಳನ್ನು ಪೂರೈಸುವ ನಿರೀಕ್ಷೆಯಿದೆ. ಇದು ಐಎಎಫ್‌ಗೆ ಜೆಟ್‌ಗಳ ವಿತರಣೆ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ವಿವರಿಸಿದ್ದಾರೆ.
.