7 rupees

News @ your fingertips

ರಿಲಯನ್ಸ್ ಬೋನಸ್ ಇಶ್ಯೂ: ಅ. 28 ರೆಕಾರ್ಡ್ ಡೇಟ್

ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ತಿಂಗಳು ಬೋನಸ್ ಇಶ್ಯೂ ಪ್ರಕಟಿಸಿ ಷೇರು ಮಾರುಕಟ್ಟೆಯಲ್ಲಿ ಒಂದಿಷ್ಟು ಕುತೂಹಲ ಮೂಡಿಸಿತ್ತು. ರಿಲಯನ್ಸ್ ತನ್ನ ರಿಟೇಲ್ ಉದ್ಯಮ ಸೇರಿದಂತೆ ಇತರ ಸಹ ಉದ್ಯಮಗಳ ಐಪಿಒಗಳನ್ನು ಪ್ರಕಟಿಸುವ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಮಾರುಕಟ್ಟೆ , ಬೋನಸ್ ಇಶ್ಯೂ ಸುದ್ದಿ ಕೇಳಿ ಅಚ್ಚರಿಪಟ್ಟಿತ್ತು.
ಬುಧವಾರ ಬೋನಸ್ ಇಶ್ಯೂಗೆ ಅಕ್ಟೋಬರ್ 28 ರೆಕಾರ್ಡ್ ದಿನವನ್ನು ಪ್ರಕಟಿಸಿದೆ.
ರೆಕಾರ್ಡ್ ದಿನಾಂಕದ ಪ್ರಕಾರ ಅ.28ರಂದು ತಮ್ಮ ಡಿಮ್ಯಾಟ್ ಖಾತೆಯಲ್ಲಿ ರಿಲಯನ್ಸ್ ಷೇರು ಹೊಂದಿರುವ ಎಲ್ಲ ಷೇರುದಾರರಿಗೆ ಬೋನಸ್ ಷೇರುಗಳು ಲಭ್ಯವಾಗಲಿವೆ.
ಕಳೆದ ಆಗಸ್ಟ್‌ನಲ್ಲಿ ನಡೆದ ರಿಲಯನ್ಸ್ ಕಂಪೆನಿಯ ಮಹಾಸಭೆಯಲ್ಲಿ 1:1 ಬೋನಸ್ ಷೇರುಗಳನ್ನು ನೀಡುವ ಪ್ರಕಟನೆ ಮಾಡಲಾಗಿದ್ದು , ಬಳಿಕ ಸೆಪ್ಟೆಂಬರ್ 5ರಂದು ನಡೆದ ಅಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆಯನ್ನು ನೀಡಲಾಗಿತ್ತು.
ಅಡಳಿತ ಮಂಡಳಿಯೂ ಕಂಪೆನಿಯ ಅಧಿಕೃತ ಷೇರು ಬಂಡವಾಳವನ್ನು 15ಸಾವಿರ ಕೋಟಿಯಿಂದ 50 ಸಾವಿರ ಕೋಟಿಗಳಿಗೆ ಹೆಚ್ಚಿಸಲು ಕೂಡಾ ಒಪ್ಪಿಗೆ ಸೂಚಿಸಿತ್ತು.
ಇದು ರಿಲಯನ್ಸ್‌ನ ಆರನೇ ಬೋನಸ್ ಇಶ್ಯೂ ಆಗಿದೆ. ಈ ಹಿಂದೆ 2009 ಹಾಗೂ 2017ರಲ್ಲಿ ಕೂಡಾ 1:1 ಬೋನಸ್ ಷೇರುಗಳನ್ನು ನೀಡಲಾಗಿತ್ತು. ಇದೀಗ 7 ವರ್ಷಗಳ ಬಳಿಕ ಕಂಪೆನಿ ಬೋನಸ್ ಷೇರುಗಳನ್ನು ನೀಡುತ್ತಿದೆ.

× Subscribe us