News @ your fingertips
News @ your fingertips
ಅನಿಲ್‌ಅಂಬಾನಿ ಒಡೆತನದ ರಿಲಯನ್ಸ್ ಪವರ್ ಕಂಪೆನಿಯ ಷೇರುಗಳು ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿವೆ.
ಕಳೆದ ವಾರ ಪ್ರತಿ ಷೇರಿನ ಬೆಲೆ 26 ರೂ. ಅಸುಪಾಸಿನಲ್ಲಿತ್ತು. ಅಲ್ಲಿಂದ ಏರುಮುಖ ಕಂಡಿರುವ ಷೇರು ಈಗ ಸುಮಾರು 34 .54ರೂ. ಗಳಿಗೆ ತಲುಪಿದೆ. ಅಂದರೆ ಸುಮಾರು ಶೇ.30ರಷ್ಟು ಹೆಚ್ಚಳ ಕಂಡಿದೆ. ಯಾವ ಕಾರಣಕ್ಕಾಗಿ ಈ ಷೇರುಗಳ ಬೆಲೆ ಹೆಚ್ಚುತ್ತಿದೆ ಎನ್ನುವುದು ಸದ್ಯದ ಪ್ರಶ್ನೆ.
ಸಾಲದ ಸುಳಿಯಲ್ಲಿ ಸಿಕ್ಕಿ ಸಂಕಷ್ಟದಲ್ಲಿದ್ದ ರಿಲಯನ್ಸ್ ಪವರ್ ಸದ್ಯ ಸಾಲ ಮುಕ್ತ ಕಂಪೆನಿಯಾಗಿರುವುದೇ ಪಾಸಿಟಿವ್ ಅಂಶ. ಸುಮಾರು 800 ಕೋ.ರೂ. ಸಾಲವನ್ನು ಕಂಪೆನಿ ಮರಳಿಸಿದ್ದು , ಸದ್ಯ ಅರ್ಥಿಕ ಅಡಚಣೆಗಳಿಂದ ಮುಕ್ತಿಯನ್ನು ಪಡೆದಿದೆ.
ಜೊತೆಯಲ್ಲಿ ಈ ಬಾರಿ ಬಜೆಟ್‌ನಲ್ಲಿ ಇಂಧನ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಒತ್ತನ್ನು ನೀಡಿರುವುದು ಈ ಕಂಪೆನಿಗೆ ವರವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡರೆ ಈ ಕಂಪೆನಿ ಮತ್ತೆ ಹಳೆಯ ಹಳಿಗೆ ಬರುವ ಸಾಧ್ಯತೆಗಳಿವೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಮತ.
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ , ರಿಲಯನ್ಸ್ ಪವರ್ ಕಂಪೆನಿಯ ಷೇರುಗಳು ಸದ್ಯದಲ್ಲೇ 40 ರೂ.ಗಡಿ ದಾಟುವ ಸಾಧ್ಯತಗಳಿವೆ. ಈಗಾಗಲೇ ಷೇರುಗಳನ್ನು ಹೊಂದಿರುವವರು ಸದ್ಯಕ್ಕೆ ಅವುಗಳನ್ನು ಕಾಯ್ದುಕೊಳ್ಳಬಹುದು. ಹೊಸ ಹೂಡಿಕೆದಾರರು 30-32 ರೂ.ಗಳ ಅಸುಪಾಸಿನಲ್ಲಿ ಖರೀದಿಸಬಹುದು.
( ಸೂಚನೆ :ಹೂಡಿಕೆದಾರರು ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ , ತೀರ್ಮಾನ ಕೈಗೊಳ್ಳುವುದು ಉತ್ತಮ. ಇದು ಕೇವಲ ಶೈಕ್ಷಣಿಕ ದೃಷ್ಟಿಯಿಂದ ನೀಡುವ ವಿವರಗಳು )
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ