7 rupees

News @ your fingertips

ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ

ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ (ಎಡಿಎಜಿ) ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಪವರ್ ಷೇರುಗಳು ಶುಕ್ರವಾರ ಶೇ.5 ರಷ್ಟು ಏರಿಕೆ ಕಂಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ ) ರಿಲಯನ್ಸ್ ಕಮ್ಯುನಿಕೇಷನ್ಸ್ ಸಾಲ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಿದರೂ, ಅದು ಸಂಸ್ಥೆಗಳ ಬೆಳವಣಿಗೆ, ಅರ್ಥಿಕ ವ್ಯವಹಾರಗಳ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಎಡಿಎಬಿ ಸ್ಪಷ್ಟೀಕರಣ ನೀಡಿದ ನಂತರ ಷೇರುಗಳ ಬೆಲೆ ಏರಿಕೆ ಕಂಡಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ರಿಲಯನ್ಸ್ ಪವರ್ ಷೇರುಗಳು ಶೇ 3.70 ಕ್ಕಿಂತ ಹೆಚ್ಚು ಏರಿಕೆಯಾಗಿ 66.90 ರೂ.ಗಳಿಗೆ ತಲುಪಿದವು. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರುಗಳು ಶೇ. 4.65 ಕ್ಕಿಂತ ಹೆಚ್ಚಳ ಕಂಡಿದ್ದು 385.10 ರೂ.ಗಳಿಗೆ ತಲುಪಿದವು.
2016 ಕ್ಕೂ ಹಿಂದೆ ಸಂಸ್ಥೆಯು ನಿಧಿಯನ್ನು ಬೇರೆ ಕಡೆಗೆ ವರ್ಗಾಯಿಸಿದ ಆರೋಪಗಳನ್ನು ಉಲ್ಲೇಖಿಸಿ, ದಿವಾಳಿಯಾದ ರಿಲಯನ್ಸ್ ಕಮ್ಯುನಿಕೇಷನ್ಸ್‌ನ ಸಾಲ ಖಾತೆಯನ್ನು ವಂಚನೆ ಎಂದು ಎಸ್‌ಬಿಐ ಪ್ರಕಟಿಸಿದೆ. ಈ ಹೇಳಿಕೆ ನಂತರ ಸಂಸ್ಥೆ ಈ ಸ್ಪಷ್ಟೀಕರಣವನ್ನು ನೀಡಿದೆ.
ಭಾರತೀಯ ಬ್ಯಾಂಕಿಂಗ್ ನಿಯಮಗಳ ಪ್ರಕಾರ, ಸಾಲವನ್ನು ವಂಚನೆ ಎಂದು ಪ್ರಕಟಿಸಿದ ಬಳಿಕ , ಕ್ರಿಮಿನಲ್ ಮೊಕದ್ದಮೆಗಳಿಗಾಗಿ ಅದನ್ನು ತನಿಖಾ ಸಂಸ್ಥೆಗಳಿಗೆ ವರದಿ ಮಾಡಬೇಕು. ಜೊತೆಯಲ್ಲಿ ಸಂಬಂಧಪಟ್ಟ ಸಾಲಗಾರನು ಮುಂದಿನ ಕನಿಷ್ಠ ಐದು ವರ್ಷಗಳವರೆಗೆ ಯಾವುದೇ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಮತ್ತಷ್ಟು ಹಣವನ್ನು ಪಡೆಯುವುದನ್ನು ನಿಷೇಧಿಸಲಾಗಿದೆ.