7 rupees

News @ your fingertips

ಯೆಸ್ ಬ್ಯಾಂಕ್ 16 ಸಾವಿರ ಕೋಟಿ ಬಂಡವಾಳ ಸಂಗ್ರಹ


ಖಾಸಗಿ ವಲಯದ ಯೆಸ್ ಬ್ಯಾಂಕ್ ಸಾಲ ಮತ್ತು ಷೇರು ವಿತರಣೆಗಳ ಮೂಲಕ 16,000 ಕೋಟಿ ರೂ. ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ.
ಮಂಗಳವಾರ ನಡೆದ ಬಾಂ್ಯಕಿನ ಅಡಳಿತ ಮಂಡಳಿ ಸಭೆಯಲ್ಲಿ ಬಂಡವಾಳ ಸಂಗ್ರಹಕ್ಕೆ ಅನುಮೋದನೆ ನೀಡಲಾಗಿದೆ ಎಂದು ಬ್ಯಾಂಕ್ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ವಿವರಿಸಲಾಗಿದೆ.
ಈಕ್ವಿಟಿ ವಿತರಣೆಯ ಮೂಲಕ 7,500 ಕೋಟಿ ರೂ.ಗಳನ್ನು ಮತ್ತು ಒಂದು ಅಥವಾ ಹೆಚ್ಚಿನ ಕಂತುಗಳಲ್ಲಿ ಭಾರತೀಯ ಅಥವಾ ವಿದೇಶಿ ಕರೆನ್ಸಿಯಲ್ಲಿ ಅರ್ಹ ಭದ್ರತಾ ಸಾಲ ಮೂಲಕ 8,500 ಕೋಟಿ ರೂ.ಗಳನ್ನು ಸಂಗ್ರಹಿಸಲಾಗುವುದು. ನಿಧಿಸಂಗ್ರಹಣೆಯ ಎರಡೂ ಮಾರ್ಗಗಳು, ಅದು ಈಕ್ವಿಟಿ ಅಥವಾ ಸಾಲವಾಗಿರಲಿ ಷೇರುದಾರ ಹಾಗೂ ಇತರ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಬಂಧನ್ ಬ್ಯಾಂಕ್ ಸೇರಿ ಹಲವಾರು ಭಾರತೀಯ ಹೂಡಿಕೆದಾರರಿಂದ ಶೇ. 20 ಪಾಲನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಜಪಾನಿನ ಎಸ್‌ಎಂಬಿಸಿ ಪ್ರಕಟಿಸಿದ ಬಳಿಕ ಈ ಬಂಡವಾಳ ಸಂಗ್ರಹ ಯೋಜನೆ ಜಾರಿಗೆ ಬಂದಿದೆ. ಈ ಹೂಡಿಕೆದಾರರು 2020 ರಲ್ಲಿ ಬ್ಯಾಂಕಿನ ಪುನರ್ರಚನೆ ಯೋಜನೆಯಲ್ಲಿ ಭಾಗವಹಿಸಿದ್ದರು.
ಎಸ್‌ಬಿಐ ತನ್ನ ಶೇ. 13.19ಪಾಲನ್ನು ಸುಮಾರು 8,890 ಕೋಟಿ ರೂ.ಗಳಿಗೆ ಮಾರಾಟ ಮಾಡಲಿದೆ . ಜೊತೆಯಲ್ಲಿ ಹೂಡಿಕೆದಾರರು ಕೂಡಾ ಬ್ಯಾಂಕಿನಲ್ಲಿನ ತನ್ನ ಶೇ.6.81ಪಾಲನ್ನು ಎಸ್‌ಎಂಬಿಸಿಗೆ ಮಾರಾಟ ಮಾಡಲಿದ್ದಾರೆ.
ಈ ಹೂಡಿಕೆ ಬಳಿಕ ಎಸ್‌ಎಂಬಿಸಿ ಯೆಸ್ ಬ್ಯಾಂಕಿನ ಆಡಳಿತ ಮತ್ತು ಕಾರ್ಯತಂತ್ರವನ್ನು ಬೆಂಬಲಿಸಲು ಇಬ್ಬರು ಕಾರ್ಯನಿರ್ವಾಹಕರಲ್ಲದ ನಿರ್ದೇಶಕರನ್ನು ಮಂಡಳಿಗೆ ನಾಮನಿರ್ದೇಶನ ಮಾಡಬಹುದು. ಈ ನಿರ್ದೇಶಕರ ನೇಮಕಾತಿಯು ಷೇರುದಾರರ ಅನುಮೋದನೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮೋದನೆಗೆ ಒಳಪಟ್ಟಿರುತ್ತದೆ.