7 rupees

News @ your fingertips

ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ

ಅಮೆರಿಕಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಹಲವು ದ್ವಿಪಕ್ಷೀಯ ವಿಚಾರಗಳ ಕುರಿತಂತೆ ಅಲ್ಲಿನ ನಾಯಕರೊಂದಿಗೆ ಮಾತುಕತೆ ಆರಂಭಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಇದೇ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ, ‘ಅಮರಿಕ ಫಸ್ಟ್’ ಎನ್ನುವ ನೀತಿಯಡಿ ವಿದೇಶಿ ವಸ್ತುಗಳಿಗೆ ತೆರಿಗೆ ಹೆಚ್ಚಳ, ವಲಸೆ ನೀತಿಯಲ್ಲಿ ಬದಲಾವಣೆ ಮುಂತಾದ ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ಹಾಗಾಗಿ ಟ್ರಂಪ್ ಜೊತೆಗಿನ ಮಾತುಕತೆ ವೇಳೆಯಲ್ಲಿ ತೆರಿಗೆ ಹಾಗೂ ಇನ್ನಿತರ ಪ್ರಮುಖ ವಿಷಯಗಳು ಕೂಡಾ ಚರ್ಚೆಗೆ ಬರುವ ನಿರೀಕ್ಷೆ ಇದೆ.
ಈ ಭೇಟಿ ಭಾರತದ ಪಾಲಿಗೆ ಹಲವಾರು ಸಕಾರಾತ್ಮಕ ಹಾದಿಗಳನ್ನು ತೆರೆದುಕೊಳ್ಳುವ ಸಾಧ್ಯತೆಗಳನ್ನು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಟ್ರಂಪ್ ಮೊದಲಿನಂದಲೂ ಭಾರತದ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ಕಾರಣ ,ದೇಶಕ್ಕೆ ಹೆಚ್ಚಿನ ಲಾಭವಾಗಲಿದೆ ಎನ್ನುವುದು ಅವರ ನಿರೀಕ್ಷೆ.
ಪದಗ್ರಹಣದ ನಂತರ ಒಂದು ತಿಂಗಳ ಅವಧಿಯಲ್ಲಿ ಟ್ರಂಪ್ ಭೇಟಿ ಮಾಡುತ್ತಿರುವ ನಾಲ್ಕನೇ ವಿಶ್ವ ನಾಯಕ ಮೋದಿ. ಈಗಾಗಲೇ ಇಸ್ರೇಲ್, ಜಪಾನ್ ಹಾಗೂ ಜೋರ್ಡಾನ್ ಮುಖ್ಯಸ್ಥರನ್ನು ಟ್ರಂಪ್ ಭೇಟಿ ಮಾಡಿದ್ದಾರೆ.

× Subscribe us