7 rupees

News @ your fingertips

ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ಕಥೆಯೇನು ?

ಕಳೆದ ಅಕ್ಟೋಬರ್ ಬಳಿಕ ಕಂಡು ಬಂದಿರುವ ಸ್ಟಾಕ್ ಮಾರುಕಟ್ಟೆ ಕುಸಿತ ಮುಖ್ಯವಾಗಿ ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಿಗೆ ದೊಡ್ಡ ಹೊಡೆತವನ್ನೇ ನೀಡಿದೆ.
ಮಿಡ್ ಕ್ಯಾಪ್ ನಿಫ್ಟಿ ಸುಮಾರು ಶೇ.7ರಷ್ಟು ಕುಸಿತ ಕಂಡಿದ್ದರೆ , ಸ್ಮಾಲ್ ಕ್ಯಾಪ್ ನಿಫ್ಟಿ ಶೇ.9ರಷ್ಟು ಇಳಿಕೆಯಾಗಿದೆ. ಸುಮಾರು ಶೇ. 70ರಷ್ಟು ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸ್ಟಾಕ್‌ಗಳು 200 ದಿನಗಳ ಸರಾಸರಿ ಬೆಲೆಗಿಂತ ಕೆಳಗೆ ಬಿದ್ದಿವೆ.
ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ಮೌಲ್ಯಮಾಪನದಲ್ಲಿನ ಗೊಂದಲಗಳು, ಅರ್ಥಿಕವಲಯದಲ್ಲಿನ ಅನಿಶ್ಚಿತತೆ , ಹೂಡಿಕೆದಾರರ ಆಯ್ಕೆಯಲ್ಲಿನ ಬದಲಾವಣೆಗಳು ಈ ಕುಸಿತದಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ.
ಕಳೆದ ಕೆಲವು ವರ್ಷಗಳಲ್ಲಿ ಮುಖ್ಯವಾಗಿ ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ನಿರೀಕ್ಷೆಗಿಂತ ಅಧಿಕ ಗಳಿಕೆಯನ್ನು ನೀಡಿವೆ. ಈ ಸ್ಟಾಕ್‌ಗಳ ವ್ಯಾಲುವೇಷನ್ ಕೂಡಾ ಅಧಿಕ ಅನಿಸಿದೆ. ಇದು ಬಹಳಷ್ಟು ಹೂಡಿಕೆದಾರರ ಅತಂಕಕ್ಕೂ ಕಾರಣವಾಗಿತ್ತು.
ಈ ಸ್ಟಾಕ್‌ಗಳ ಬೆಲೆ ಏರಿಕೆಯಾಗುತ್ತಿದ್ದಂತೆ ಹಲವರು ಲಾಭ ಬುಕ್ ಮಾಡಿದರೆ , ಉಳಿದವರು ಕುಸಿತ ಆರಂಭವಾಗುವ ಹೊತ್ತಿಗೆ ಹೊರಬರಲಾರಂಭಿಸಿದರು.
ಅಧಿಕ ಬಡ್ಡಿದರ ಹಾಗೂ ಸಕಾಲಕ್ಕೆ ಸಾಲದ ಕೊರತೆ ಮಧ್ಯಮ ಹಾಗೂ ಸಣ್ಣ ಗಾತ್ರದ ಉದ್ಯಮಗಳಿಗೆ ದೊಡ್ಡ ಮಟ್ಟದ ಅರ್ಥಿಕ ಸಂಕಷ್ಟವನ್ನು ತಂದಿಟ್ಟಿತು. ಹಾಗಾಗಿ ಮುಖ್ಯವಾಗಿ ರಿಯಲ್ ಎಸ್ಟೀಟ್, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಯೋಜನೆಗಳು ನಿಗದಿತ ವೇಳೆಗೆ ಪೂರ್ಣಗೊಳ್ಳದೆ ನಿರೀಕ್ಷಿತ ಬೆಳವಣಿಗೆ ಕಾಣಲಿಲ್ಲ. ಅದು ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ಗಳಿಕೆಯಲ್ಲಿ ದೊಡ್ಡ ಮಟ್ಟದ ಏರಿಳಿಕೆಗಳಿಗೆ ಕಾರಣವಾಯಿತು.
ಸ್ಟಾಕ್ ಮಾರ್ಕೆಟ್‌ನಲ್ಲಿ ಕೆಲವೊಂದು ಅನಿಶ್ಚಿತ ಬೆಳವಣಿಗೆಗಳಿಂದಲೂ ಕೂಡಾ ಸಾಮಾನ್ಯ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮನ ಮಾಡಿರುವುದು ಕಂಡು ಬಂದಿದೆ. ಅಧಿಕ ಗಳಿಕೆ ನೀಡುವ ಬಾಂಡ್ ಹಾಗೂ ಠೇವಣಿಗಳತ್ತ ಹೂಡಿಕೆದಾರರು ಮುಖ ಮಾಡಿರುವ ಕಾರಣ ಸಹಜವಾಗಿ ಸ್ಟಾಕ್ ಮಾರುಕಟ್ಟೆಯಲ್ಲಿ ಲಾಭ ನಗದೀಕರಣ ಕಂಡು ಬಂದಿದೆ.
ದೇಶಿಯ ವಿದ್ಯಮಾನಗಳಿಗಿಂತಲೂ ವಿದೇಶಿ ರಾಜಕೀಯ ಹಾಗೂ ಅರ್ಥಿಕ ನೀತಿಗಳು,ಎದುರಾಗುತ್ತಿರುವ ಹೊಸ ಹೊಸ ಸವಾಲುಗಳು ಭಾರತೀಯ ಮಾರುಕಟ್ಟೆಯ ಮೇಲೆ ಬಹುವಾಗಿ ಪರಿಣಾಮ ಬೀರುತ್ತಿವೆ. ಭಾರತದ ಅರ್ಥಿಕ ವ್ಯವಸ್ಥೆ ಸ್ಥಿರವಾಗಿದ್ದರೂ, ಹೊರಗಿನ ಅಗುಹೋಗುಗಳ ಪ್ರಭಾವವೇ ಜಾಸ್ತಿಯಾಗುತ್ತಿದೆ. ಜೊತೆಯಲ್ಲಿ ಬಂಗಾರದ ಹೂಡಿಕೆಗೆ ಅಕರ್ಷಕವಾಗಿ ಕಾಣುತ್ತಿರುವುದು ಕೂಡಾ ಸ್ಟಾಕ್‌ಗಳ ಬೆಲೆ ಕುಸಿತಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ.
ಜಾಗತಿಕ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಕೆಲ ಸಮಯದಲ್ಲಿ ಮತ್ತೆ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಸ್ಟಾಕ್‌ಗಳು ಪುಟಿದೇಳುವ ಸಾಧ್ಯತೆಗಳಿವೆ. ಮುಖ್ಯವಾಗಿ ಇಂಧನ, ಫಾರ್ಮಾ, ಮೂಲ ಸೌಕರ್ಯ, ಬ್ಯಾಂಕಿಂಗ್ ಸ್ಟಾಕ್‌ಗಳಿಗೆ ಹೆಚ್ಚಿನ ಬೇಡಿಕೆ ಸಾಧ್ಯತೆಗಳಿವೆ.

× Subscribe us