News @ your fingertips
News @ your fingertips
ಭಾರತದ ಪ್ರಮುಖ 8 ಕೈಗಾರಿಕಾ ಕ್ಷೇತ್ರಗಳಲ್ಲಿ ಕಲ್ಲಿದ್ದಲು, ವಿದ್ಯುತ್ ಮತ್ತು ಸಿಮೆಂಟ್ ವಲಯ ತೋರಿದ ಉತ್ತಮ ಬೆಳವಣಿಗೆಯ ನಡುವೆಯೂ ಮಾರ್ಚ್ ತಿಂಗಳಲ್ಲಿ ಕೈಗಾರಿಕಾವಲಯ ಪ್ರಗತಿ ಶೇ 5.2ರಷ್ಟಿದ್ದು, ನಿರೀಕ್ಷಿತ ಮಟ್ಟ ತಲುಪಿಲ್ಲ.
ಈ ಮೂರು ಕ್ಷೇತ್ರಗಳು ಶೇ.8ರಷ್ಟು ಬೆಳವಣಿಕೆಯನ್ನು ಕಂಡಿದ್ದು ಮಾತ್ರ ಅಶಾದಾಯಕವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ ಶೇ.4.2ರಷ್ಟು ಸಾಧನೆಯಾಗಿತ್ತು. ಕಳೆದ ತಿಂಗಳು ಫೆಬ್ರವರಿಯಲ್ಲಿ ಶೇ.7.1 ಪ್ರಗತಿಯಾಗಿದ್ದು, ಅದನ್ನು ಹೋಲಿಸಿದರೆ ಮಾರ್ಚ್‌ನಲ್ಲಿ ಬೆಳವಣಿಗೆ ಇಳಿಮುಖವಾಗಿದೆ. ಅದ್ಯತಾವಲಯದ 8 ಕೈಗಾರಿಕೆವಲಯಗಳಲ್ಲಿ 6ರಲ್ಲಿ ಉತ್ತಮ ಪ್ರಗತಿಯಾಗಿದ್ದು , 2 ಕ್ಷೇತ್ರಗಳಲ್ಲಿನ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ.
ರಿಫನೈರಿ ಉತ್ಪನ್ನಗಳು ಹಾಗೂ ರಸಗೊಬ್ಬರ ಕ್ಷೇತ್ರಗಳಲ್ಲಿ ಪ್ರಗತಿ ತಲಾ ಶೇ.0.3 ಹಾಗೂ ಶೇ.1.3 ದಾಖಲಾಗಿದೆ.
2023-24 ಸಾಲಿನಲ್ಲಿ 8 ವಲಯದ ಕೈಗಾರಿಕೆಗಳ ಒಟ್ಟಾರೆ ಪ್ರಗತಿ ಶೇ.7.5. ಹಿಂದಿನ ವರ್ಷ ಶೇ.7.8ರಷ್ಟಿದ್ದು,ಅಲ್ಪ ಕುಸಿತವನ್ನು ಕಂಡಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಕಲ್ಲಿದ್ದಲು, ಕಚ್ಚಾ ತೈಲ,ರಿಫೈನರಿ ಉತ್ಪನ್ನಗಳು,ವಿದ್ಯುತ್,ನ್ಯಾಚುರಲ್ ಗ್ಯಾಸ್, ಸ್ಟೀಲ್, ಸಿಮೆಂಟ್,ರಸಗೊಬ್ಬರ ಈ ಕ್ಷೇತ್ರಗಳು ಭಾರತದ ಕೈಗಾರಿಕಾ ಉತ್ಪಾದನಾ ಇಂಡೆಕ್ಸ್‌ನಲ್ಲಿ ಶೇ.40.27ಪಾಲನ್ನು ಹೊಂದಿವೆ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ