7 rupees

News @ your fingertips

ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನ,ಮನೆಗಳಿಗೆ ದಾಳಿ

 

 

ಹಾಸನ ಲೈಂಗಿಕ ಪ್ರಕರಣ ಸಂಬಂಧ ಮಾಜಿ ಸಚಿವ, ಜೆಡಿಎಸ್ ನಾಯಕ,ಶಾಸಕ ಎಚ್.ಡಿ.ರೇವಣ್ಣ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿದೆ.
ಶನಿವಾರ ಸಂಜೆ ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಅವರ ಮನೆಯಲ್ಲಿ ಎಸ್‌ಐಟಿ ಪೊಲೀಸರು ರೇವಣ್ಣ ಅವರನ್ನು ವಶಕ್ಕೆ ಪಡೆದು ,ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣಕ್ಕೆ ಸಂಬಂಧಿತ ಸಂತ್ರಸ್ತೆಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬು ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಶನಿವಾರ ರೇವಣ್ಣ ಅವರನ್ನು ಬಂಧಿಸಲಾಗಿದೆ.
ಪ್ರಜ್ವಲ್ ಇನ್ನೂ ವಿದೇಶದಲ್ಲಿದ್ದು , ವಿಚಾರಣೆಗೆ ಹಾಜರಾಗಿಲ್ಲ. 7 ದಿನಗಳ ಕಾಲಾವಕಾಶ ನೀಡುವಂತೆ ಅವರು ವಕೀಲರ ಮೂಲಕ ಮನವಿ ಮಾಡಿದ್ದರು. ಇದರ ಜೊತೆಯಲ್ಲಿ ರೇವಣ್ಣ ಅವರಿಗೂ ವಿಚಾರಣೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರೂ, ಎರಡು ದಿನ ಕಾಲಾವಕಾಶ ಕೇಳಿದ್ದರು.
ಅದರೆ ಎಸ್‌ಐಟಿ ಕಾಲಾವಕಾಶ ನಿರಾಕರಿಸಿ, ಲುಕ್‌ಔಟ್ ನೋಟಿಸ್ ಹೊರಡಿಸಿತ್ತು.
ಈ ಪ್ರಕರಣ ಸಂಬಂಧಿಸಿ ಎಸ್‌ಐಟಿ ಪೊಲೀಸರು ಎಚ್.ಡಿ.ರೇವಣ್ಣ , ಪ್ರಜ್ವಲ್ ರೇವಣ್ಣ ಅವರ ಮನೆ , ತೋಟ , ಸಂಬಂಧಿಕರ, ಗೆಳೆಯರ ಮನೆಗಳಿಗೂ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.