7 rupees

News @ your fingertips

ಮತ ಪ್ರಮಾಣ ಕುಸಿತ, ಮಾರುಕಟ್ಟೆಯ ಚಿಂತೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ಷೇರು ಮಾರುಕಟ್ಟೆಯನ್ನು ಕೂಡಾ ಚಿಂತೆಗೀಡು ಮಾಡಿದೆ.
ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯ ಮತದಾನ ಕಡಿಮೆಯಾಗಿದೆ. ಸದ್ಯದ ಸರಾಸರಿ ಶೇ.66.9ರಷ್ಟಿದೆ. ಅದು ಕೂಡಾ ಬಿಜೆಪಿ ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗಿರುವ ಕಾರಣ ಬಿಜೆಪಿ ನಿರೀಕ್ಷೆಯಷ್ಟು ಸ್ಥಾನಗಳನ್ನು ಪಡೆಯುವುದು ಕಷ್ಟ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅನಿಸಿಕೆ.
ಇದೇ ಕಾರಣಕ್ಕೆ ಷೇರು ಮಾರುಕಟ್ಟೆ ಸಾಕಷ್ಟು ಏರಿಳಿತಗಳಿಗೆ ಸಾಕ್ಷಿಯಾಗುತ್ತಿದೆ.
ಈ ಬಾರಿ 400 ಕ್ಕೂ ಗೆಲ್ಲುತ್ತೇವೆ ಎಂದು ಬಿಜೆಪಿ ಸಾರುತ್ತಿದ್ದರೂ, ವಾಸ್ತವ ಪರಿಸ್ಧಿತಿ ಹಾಗಿಲ್ಲ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ.
ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಅಡ್ಡಿಯಾಗದು.ಸುಮಾರು 300 ಅಸುಪಾಸಿನಲ್ಲಿ ಸಿಂಪಲ್ ಬಹುಮತದಿಂದ ಬಿಜೆಪಿ ಸರಕಾರ ರಚಿಸುವುದು ಖಚಿತ ಎನ್ನುವುದು ಅವರ ಮಾತು.
ಅಂಕಿ- ಅಂಶಗಳ ಪ್ರಕಾರ 2019 ಲೋಕಸಭಾ ಚುನಾವಣೆ ನಂತರ ದೇಶದಲ್ಲಿ 1.60 ಕೋಟಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.ಅದರಲ್ಲಿ ಬಹುಭಾಗ 18-19 ಪ್ರಾಯದ ಮತದಾರರು. ಅದನ್ನು ಗಮನಿಸಿದಾಗ ಮತದಾನದ ಪ್ರಮಾಣ ಹೆಚ್ಚಾಬೇಕಿತ್ತು. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಜನರು ಮತಗಟ್ಟೆಗಳಿಗೆ ಬರುವುದನ್ನು ನಿಲ್ಲಿಸಿರುವುದು, ಮತದಾನದ ಹಕ್ಕನ್ನು ನಿರ್ಲಕ್ಷಿಸಿರುವುದು ಮತ ಪ್ರಮಾಣ ಕುಸಿತಕ್ಕೆ ದೊಡ್ಡ ಕಾರಣವಾಗಿದೆ.
ಅದರೆ ಗೃಹ ಸಚಿವ ಅಮಿತ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೂ.4ರಂದು ಷೇರು ಮಾರುಕಟ್ಟೆ ಜಿಗಿಯಲಿದೆ ಎಂಬ ಹೇಳಿಕೆ ನೀಡಿದ್ದಾರೆ, ಇದು ಮಾರುಕಟ್ಟೆಗೆ ಒಂದಿಷ್ಟು ಧೈರ್ಯ ತುಂಬಿದೆ, ಹೊಸ ಹುಮಸ್ಸು ಮಾಡಿಸಿದೆ.
ಇದೇ ಹೊತ್ತಲ್ಲಿ ಜಾಗತಿಕ ವಿದ್ಯಮಾನಗಳು ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿದ್ದು , ಇದು ಕೂಡಾ ಒಂದಿಷ್ಟು ಪರಿಣಾಮ ಬೀರಲಿದೆ.
ಒಟ್ಟಿನಲ್ಲಿ ಈ ಏರಿಳಿತ ಇನ್ನೂ ಹಲವು ದಿನ ಮುಂದುವರಿಯುವ ಲಕ್ಷಣಗಳಿವೆ.
.