7 rupees

News @ your fingertips

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ

ಮೂರು ದಿನಗಳ ರಾಜಕೀಯ ಅನಿಶ್ಚತೆಯ ಬಳಿಕ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ.
ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಮೂರು ದಿನಗಳ ಹಿಂದೆಷ್ಟೇ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಬಿಜೆಪಿ ನಿರಂತರ ಕಸರತ್ತು ಮಾಡಿದ್ದರೂ,ಪ್ರಕ್ರಿಯೆ ಅಂತಿಮಗೊಳ್ಳದೆ ಕಗ್ಗಂಟು ಮುಂದುವರಿದಿತ್ತು.
ಬಿಜೆಪಿ ರಾಜ್ಯ ಉಸ್ತುವಾರಿ ಸಂಬೀತ್ ಪಾತ್ರಾ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟು ನಿರಂತರವಾಗಿ ಬಿಜೆಪಿ ನಾಯಕರು , ಶಾಸಕರೊಂದಿಗೆ ಮಾತುಕತೆ ನಡೆಸಿದರೂ, ನಾಯಕನ ಆಯ್ಕೆ ಸಾಧ್ಯವಾಗಿರಲಿಲ್ಲ.
ಈ ರಾಜಕೀಯ ಬೆಳವಣಿಗೆ ಬಳಿಕ ರಾಜ್ಯಪಾಲರು ಕೇಂದ್ರ ಸರಕಾರಕ್ಕೆ ವರದಿಯನ್ನು ರವಾನಿಸಿದ್ದರು. ಅದನ್ನು ಅನುಸರಿಸಿ ಕೇಂದ್ರದ ಶಿಫಾರಸಿನಂತೆ ರಾಷ್ಟ್ರಪತಿಗಳು ಗುರುವಾರ ಸಂಜೆ ರಾಷ್ಟ್ರಪತಿ ಆಳ್ವಿಕೆಗೆ ಸಹಿ ಹಾಕಿದ್ದಾರೆ

× Subscribe us