News @ your fingertips
News @ your fingertips
ವಿಶ್ವಖ್ಯಾತ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಭಾರತದಲ್ಲಿ ತನ್ನ ಉದ್ಯಮ ಆರಂಭಿಸುವ ಬಗ್ಗೆ ಇನ್ನೂ ಮೌನವಾಗಿದ್ದು, ಏನ್ನನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
ಕೇಂದ್ರ ಸರಕಾರ ನೂತನ ಇವಿ (ಎಲೆಕ್ಟ್ರಿಕ್ ವಾಹನ)ಪಾಲಿಸಿಯನ್ನು ಪ್ರಕಟಿಸಿದೆ. ಅದರನ್ವಯ ಟೆಸ್ಲಾ ಭಾರತದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸುವ ಬಗ್ಗೆ ಆಸಕ್ತಿ ತಳೆದಿತ್ತು.
ಕಳೆದ ತಿಂಗಳು ಎಪ್ರಿಲ್ 21-22ರಂದು ಟೆಸ್ಲಾ ಮುಖ್ಯಸ್ಥ ಎಲನ್ ಮಸ್ಕ್ ಅವರ ಭಾರತ ಭೇಟಿ ನಿಗದಿಯಾಗಿತ್ತು.ಅಲನ್ ಮಸ್ಕ್ ಹಾಗೂ ಟೆಸ್ಲಾದ ಹಿರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಭೆ ನಡೆಸುವ ಬಗ್ಗೆಯೂ ಚಿಂತನೆ ನಡೆದಿತ್ತು. ಇದೇ ಸಂದರ್ಭದಲ್ಲಿ ಟೆಸ್ಲಾ ಭಾರತದಲ್ಲಿ ಹೂಡಿಕೆಯನ್ನು ಪ್ರಕಟಿಸುವ ನಿರೀಕ್ಷೆಯನ್ನು ಮಾಡಲಾಗಿತ್ತು.ಅದರೆ ಅಲನ್ ಮಸ್ಕ್ ಇದ್ದಕ್ಕಿದ್ದಂತೆ ಭಾರತ ಭೇಟಿಯನ್ನು ಮುಂದೂಡಿದರು.
ಭಾರತದಲ್ಲಿ ಉದ್ಯಮ ಸ್ಥಾಪನೆ ಹಾಗೂಹೂಡಿಕೆ ಇನ್ನಿತರ ವಿಚಾರ ಟೆಸ್ಲಾ ಕಂಪೆನಿಗೆ ಈ ಮೈಲ್ ರವಾನಿಸಲಾಗಿದೆ. ಆದರೆ ಇದುವರೆಗೆ ಅಲ್ಲಿಂದ ಯಾವುದೇ ಉತ್ತರವಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
2024ರಲ್ಲಿ ಟೆಸ್ಲಾ ಕಾರುಗಳು ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇತ್ತು.
.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ