7 rupees

News @ your fingertips

ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ

ಭಾರತದ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಕೈ ಚಳಕ ತೋರಿಸಿದ ಅರೋಪದ ಮೇಲೆ ಅಮೆರಿಕ ಮೂಲದ ಜೇನ್ ಸ್ಟ್ರೀಟ್ ಸಂಸ್ಥೆ ಮೇಲೆ ಸೆಬಿ ನಿಷೇಧ ಹೇರಿದೆ.
ಜೇನ್ ಸ್ಟ್ರೀಟ್ ಗೂಪ್ 2000ರಲ್ಲಿ ಸ್ಥಾಪನೆಯಾಗಿರುವ ಹಣಕಾಸು ಸೇವೆಗಳ ಉದ್ಯಮ. ಜಾಗತಿಕ ಮಟ್ಟದಲ್ಲಿ ಹಲವಾರು ದೇಶಗಳಲ್ಲಿ ಇದು ಹರಡಿಕೊಂಡಿದ್ದು , ಕಂಪೆನಿಯ ವೆಬ್‌ಸೈಟ್ ಪ್ರಕಾರ, ಇದು ಐದು ಜಾಗತಿಕ ಕಚೇರಿಗಳನ್ನು ಹೊಂದಿದ್ದು 3000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.45 ದೇಶಗಳಲ್ಲಿ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಹಿವಾಟು ನಡೆಸುತ್ತಿದೆ.
ಜೆಎಸ್‌ಐ ಇನ್ವೆಸ್ಟ್‌ಮೆಂಟ್ಸ್, ಜೆಎಸ್‌ಐ2 ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಜೇನ್ ಸ್ಟ್ರೀಟ್ ಸಿಂಗಾಪುರ್ ಪ್ರೈವೇಟ್ ಲಿಮಿಟೆಡ್ ಮತ್ತು ಜೇನ್ ಸ್ಟ್ರೀಟ್ ಏಷ್ಯಾ ಟ್ರೇಡಿಂಗ್ ಸಂಸ್ಧೆಗಳನ್ನು ಸೇರಿ ಒಟ್ಟಾಗಿ ಜೇನ್ ಸ್ಟ್ರೀಟ್ ಗ್ರೂಪ್ ಎಂದು ಕರೆಯಲಾಗುತ್ತದೆ. ಇವೆಲ್ಲವನ್ನೂ ಮುಂದಿನ ಸೂಚನೆವರೆಗೆ ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಸುವುದನ್ನು ಸೆಬಿ ನಿಷೇಧಿಸಿದೆ.
ಅಕ್ರಮ ಲಾಭ ಗಳಿಸಲು ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಮಟ್ಟವನ್ನು ಕೈ ಚಳಕದಿಂದ ನಿರ್ವಹಿಸಿದ ಆರೋಪದ ಮೇಲೆ ಜೇನ್ ಸ್ಟ್ರೀಟ್ ಗ್ರೂಪ್ ಸೆಬಿಯ ಪರಿಶೀಲನೆಗೆ ಒಳಪಟ್ಟಿದೆ.