7 rupees

News @ your fingertips

ಭವಿಷ್ಯದ ಹೂಡಿಕೆ ರಿಯಲ್ಎಸ್ಟೇಟ್ ಬೆಸ್ಟ್

ಬಹಳಷ್ಟು ಜನರು ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತ ಅನ್ನೋ ಪ್ರಶ್ನೆ ಕೇಳುತ್ತಿರುತ್ತಾರೆ. ಬ್ಯಾಂಕ್ ಠೇವಣಿಯಲ್ಲಿ ಯಾವ ಅಪಾಯ ಇಲ್ಲ ಎನ್ನುವುದು ನಮ್ಮೆಲ್ಲರ ಸಾಮಾನ್ಯ ನಂಬಿಕೆ. ಅದೇ ರೀತಿಯಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರ ಕೂಡಾ. ಇದು ಭವಿಷ್ಯದ ಬೆಸ್ಟ್ ಹೂಡಿಕೆಯ ಆಯ್ಕೆಗಳಲ್ಲೊಂದು. ಜೊತೆಗೆ ಸೇಫ್ ಕೂಡಾ.

ರಿಯಲ್ ಎಸ್ಟೇಟ್ ಸಾರ್ವಕಾಲಿಕ ಬೇಡಿಕೆ ಕ್ಷೇತ್ರ ಅಂದ್ರು ತಪ್ಪಲ್ಲ.
ಅಧುನಿಕರಣದ ಗಾಳಿ ಬೀಸುತ್ತಿದ್ದಂತೆ ಚಿಗುರಿ ಕೊಂಡ ಕ್ಷೇತ್ರಗಳಲ್ಲಿ ಇದು ಕೂಡಾ ಸೇರಿದೆ. ಬೆಳೆಯುತ್ತಿರುವ ಜನಸಂಖ್ಯೆ ,ಕೈಗಾರಿಕಾ ರಂಗದಲ್ಲಿ ಅದ್ಭುತ ಬೆಳವಣಿಗೆ, ಏರುಗತಿ ಕಂಡ ಉದ್ಯೋಗಾವಕಾಶಗಳು ರಿಯಲ್ ಎಸ್ಟೇಟ್‌ನ ಬೂಮ್‌ಗೆ ಮಹತ್ತರ ಕೊಡುಗೆ ನೀಡಿದವು.
ಜಗತ್ತಿನ ಅರ್ಥಿಕತೆ ಮೇಲೆ ನೇರವಾಗಿ ಪ್ರಭಾವಬಲ್ಲ ೧೪ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಭಾರತವನ್ನು ಗಮನಿಸಿದರೆ ಕೃಷಿ ನಂತರ ೨ನೇ ದೊಡ್ಡ ಉದ್ಯೋಗ ಸೃಷ್ಟಿಯ ನೆಲೆಯೂ ಇದೇ ಆಗಿದೆ.
ಭಾರತದಲ್ಲಿ ಇತ್ತೀಚಿಗಂತೂ ರಿಯಲ್ ಎಸ್ಟೇಟ್ ಅತೀ ಅಕರ್ಷಣೀಯ ಹೂಡಿಕೆಯ ಕ್ಷೇತ್ರವಾಗಿಪರಿವರ್ತಿತವಾಗಿದೆ. ಅನಿವಾಸಿ ಭಾರತೀಯರಿಗಂತೂ ಬೆಂಗಳೂರು ನೆಚ್ಚಿನ ಹೂಡಿಕೆ ತಾಣವಾಗಿದೆ. ಇದನ್ನು ಬಿಟ್ಟರೆ ಅಹ್ಮದಾಬಾದ್, ಪುಣೆ , ಗೋವಾ, ಚೆನ್ನೈ, ಡೆೆಹರಾಡೂನ್, ದಿಲ್ಲಿಯಲ್ಲಿ ರಿಯಲ್ ಎಸ್ಟೇಟ್ ಹೆಚ್ಚಿನ ಆಕರ್ಷಣೆಯನ್ನು ಹೊಂದಿದೆ.
೨೦೧೯ರಲ್ಲಿ ಭಾರತದ ರಿಯಲ್‌ಎಸ್ಟೇಟ್ ಮಾರುಕಟ್ಟೆ ೧೨ ಸಾವಿರ ಕೋ.ರೂ. ಅದು ೨೦೪೦ ಹೊತ್ತಿಗೆ ೬೫ ಸಾವಿರ ಕೋಟಿಗಳಿಗೆ ಬೆಳವಣಿಗೆ ಹೊಂದುವ ಸಾಧ್ಯತೆಗಳಿವೆ. ಕಾರಣ ವಾಣಿಜ್ಯ ಹಾಗೂ ವಸತಿ ಯೋಜನೆಗಳಲ್ಲಿ ಆಗುತ್ತಿರುವ ದೊಡ್ಡ ಹೂಡಿಕೆಗಳು.
ಭಾರತ ಸರಕಾರವೂ ಮೂಲ ಭೂತ ಸವಲತ್ತುಗಳ ಬಗ್ಗೆ ಹೆಚ್ಚಿನ ಅದ್ಯತೆ ನೀಡುತ್ತಿರುವುದು ಕೂಡಾ ರಿಯಲ್ ಎಸ್ಟೇಟ್ ದೊಡ್ಡ ಮಟ್ಟದ ಬೂಸ್ಟ್ ಪಡೆಯಲು ಕಾರಣ.
೨೦೨೩ ಸಾಲಿನಲ್ಲಿ ಇದುವರೆಗೆ ಭಾರತದಲ್ಲಿ ೩.೪೭ ಲಕ್ಷ ಕೋಟಿಯಷ್ಟು ವಸತಿ ಆಸ್ತಿಗಳು ಮಾರಾಟವಾಗಿದ್ದು , ಇದು ಇದುವರೆಗಿನ ದಾಖಲೆಯಾಗಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಿಯಲ್‌ಎಸ್ಟೇಟ್ ಬೆಳವಣಿಗೆ ಕಾಣುತ್ತಿದೆ.
ಇತ್ತೀಚಿನ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಸದ್ಯ ೧ ಸಾವಿರ ಜನರಿಗೆ ೩ ಮನೆಯಂತೆ ನಿರ್ಮಾಣವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಸದ್ಯ ಮೇಲ್ವರ್ಗ ಹಾಗೂ ಜನ ಸಾಮಾನ್ಯರಿಗೆ ಸೇರಿ ಒಟ್ಟು ೨.೫ ಕೋಟಿಯುಷ್ಟು ಮನೆಗಳ ಬೇಡಿಕೆಯಿದೆ.
ಈಗ ಇರುವ ದೊಡ್ಡ ಸವಾಲು ನಗರಗಳ ವಿಸ್ತರಣೆ. ನಗರಗಳ ಕೇಂದ್ರಗಳಲ್ಲಿ ಲ್ಯಾಂಡ್ ಬ್ಯಾಂಕ್ ಬಹಳಷ್ಟು ಕರಗುತ್ತಿದ್ದು ವಸತಿ ಸಮುಚ್ಚಯಗಳಿಗೆ ಜಾಗವಿಲ್ಲದಂತಾಗಿದೆ.ಹಾಗಾಗಿ ನಗರದ ಹೊರವಲಯಗಳಿಗೆ ವಿಸ್ತರಿಸುವುದು ಅನಿವಾರ್ಯ. ಹೊರ ಭಾಗದಲ್ಲಿ ನೀರು ಸರಬರಾಜು,ರಸ್ತೆ , ವಿದ್ಯುತ್ ಮುಂತಾದ ಮೂಲಭೂತ ಸವಲತ್ತು ಸೇರಿ ಹಲವು ಸವಾಲುಗಳು ಎದುರಾಗುತ್ತಿವೆ. ಮುಂಬೈ , ಡೆಲ್ಲಿ , ಬೆಂಗಳೂರು ಸೇರಿದಂತೆ ಹಲವಡೆ ನಗರಗಳೂ ಈಗಾಗಲೇ ನಿರೀಕ್ಷೆ ಮೀರಿ ಬೆಳೆದು ನಿಂತಿವೆ.
ಈ ಬೆಳವಣಿಗೆಯನ್ನು ಗಮನಿಸಿದಾಗ ಮುಂದಿನ ೧೦ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ನಿರೀಕ್ಷೆಗೂ ಮೀರಿ ವಿಸ್ತರಿಸಲಿದೆ. ವಸತಿ ಹಾಗೂ ವಾಣಿಜ್ಯ ಕಟ್ಟಡಗಳು ಭಾರಿ ಬೇಡಿಕೆಯನ್ನು ಹೊಂದಲಿವೆ.
ಹಾಗಾಗಿ ಈ ಕ್ಷೇತ್ರದ ಹಲವಾರು ಕಂಪೆನಿಗಳ ಅತ್ಯುತ್ತಮ ನಿರ್ವಹಣೆಯನ್ನು ತೋರಿಸಲಾರಂಭಿಸಿವೆ. ಅವುಗಳಲ್ಲಿ ಹೂಡಿಕೆ ದೊಡ್ಡ ಮಟ್ಟದ ಲಾಭವನ್ನು ತಂದು ಕೊಡಬಲ್ಲದು.