7 rupees

News @ your fingertips

xr:d:DAFAL4fNdQg:3121,j:31054527422,t:22071907

ಬಿಪಿಸಿಎಲ್‌ನಿಂದ 1:1 ಬೋನಸ್ ಷೇರು

ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಷೇರುದಾರರಿಗೆ 1:1 ಬೋನಸ್ ಷೇರು ಪ್ರಕಟಿಸಿದೆ.
10 ರೂ. ಬೆಲೆಯ ಪ್ರತಿಯೊಂದು ಷೇರಿಗೂ ಒಂದು ಷೇರು ಬೋನಸ್ ಸಿಗಲಿದೆ. ಇದಕ್ಕಾಗಿ ಜೂನ್ 22 ರೆಕಾರ್ಡ್ ದಿನವನ್ನಾಗಿ ನಿಗದಿಪಡಿಸಲಾಗಿದೆ.
ಬಿಪಿಸಿಎಲ್ ಗುರುವಾರ ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಈ ಅವಧಿಯಲ್ಲಿ 4789.57 ಕೋ.ರೂ. ಕ್ರೋಢಿಕೃತ ಲಾಭ ಗಳಿಸಿದೆ. ಕಳೆದ ಷರ್ವ ಇದೇ ಸಾಲಿಗೆ ಹೋಲಿಸಿದರೆ ಶೇ.30ರಷ್ಟು ಕುಸಿತವನ್ನು ಕಂಡಿದೆ. ಹಿಂದಿನ ಸಾಲಿನ ಲಾಭ 6870.47 ಕೋ.ರೂ.ಗಳು. ತೈಲ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದ ಅದಾಯದಲ್ಲಿ ಕುಸಿತವಾಗಿದೆ ಎಂದು ಕಂಪೆನಿ ತಿಳಿಸಿದೆ.
ಹಿಂದಿನ ಸಾಲಿನಲ್ಲಿ ಕಂಪೆನಿಯ ಕಾರ್ಯನಿರ್ವಹಣಾ ಅದಾಯ 1.33 ಲಕ್ಷ ಕೋಟಿಗಳಾಗಿದ್ದರೆ, ಈ ಸಾಲಿನಲ್ಲಿ ಕೊಂಚ ಇಳಿಕೆಯಾಗಿದ್ದು 1.32 ಲಕ್ಷ ಕೋಟಿಗಳಾಗಿದೆ.

× Subscribe us