7 rupees

News @ your fingertips

ಫೆಡ್‌ ಗವರ್ನರ್ ವಜಾಗೊಳಿಸುವರೇ ಟ್ರಂಪ್ ?

ಸದಾ ಸುದ್ದಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಫೆಡರಲ್ ಗವರ್ನರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.
ಪ್ರತಿಕಾರವಾಗಿ ಫೆಡರಲ್ ರಿಸರ್ವ್ ಗವರ್ನರ್ ಲೀಸಾ ಕುಕ್ ಅವರು ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.
ಅಧ್ಯಕ್ಷರು ತನ್ನನ್ನು ಅಧಿಕಾರದಿಂದ ಪದಚ್ಯುತಗೊಳಿಸುವ ಪ್ರಯತ್ನ ನಡೆಸಿದ್ದು , ಅವರಿಗೆ ಅಂತಹ ಯಾವುದೇ ಅಧಿಕಾರ ಇಲ್ಲ. ಇದು ಅಮೆರಿಕದ ಕೇಂದ್ರ ಬ್ಯಾಂಕಿನ ಸ್ವಾತಂತ್ರೃವನ್ನು ಪರೀಕ್ಷಿಸಬಹುದಾದ ಅಭೂತಪೂರ್ವ ಕಾನೂನು ಹೋರಾಟಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ ಎಂದು ಕುಕ್ ಹೇಳಿದ್ದಾರೆ.
ಫೆಡ್ ಗವರ್ನರ್ ಪದಚ್ಯುತಿಗೆ ಸರಿಯಾದ ಪ್ರಕ್ರಿಯೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು. ಅಧ್ಯಕ್ಷರ ಏಕಪಕ್ಷೀಯ ನಿರ್ಧಾರವು ಅವರ ಹಕ್ಕುಗಳು ಮತ್ತು ಫೆಡ್‌ನ ಸಾಂಸ್ಥಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಕುಕ್ ಸುಪ್ರೀಂಕೋರ್ಟ್‌ನ ತೀರ್ಪನ್ನು ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣವು ಫೆಡರಲ್ ರಿಸರ್ವ್‌ನ ಸ್ವಾತಂತ್ರೃವನ್ನು ಅನುಚಿತ ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸುವ ಬಗ್ಗೆ ಎಂದು ಲೀಸಾ ಕುಕ್ ಅವರ ಕಾನೂನು ತಂಡ ಹೇಳಿಕೆಯಲ್ಲಿ ವಿವರಿಸಿದೆ.
ಫೆಡ್‌ನ 112 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗವರ್ನರ್ ವಜಾಗೊಳಿಸಲು ಪ್ರಯತ್ನಿಸಲಾಗಿದೆ.
ಆಗಸ್ಟ್ 25 ರಂದು ಟ್ರಂಪ್ ಅವರು ಫೆಡ್ ಗವರ್ನರ್ ಅವರನ್ನು ವಜಾಗೊಳಿಸುವುದಾಗಿ ಘೋಷಿಸಿದ್ದರು. 2021 ರಲ್ಲಿ, ಅಂದರೆ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಗೆ ಸೇರುವ ಒಂದು ವರ್ಷದ ಮೊದಲು, ಕುಕ್ ಮೋರ್ಟ್‌ಗೇಜ್ ಸಂಬಂಧಿಸಿದ ವಂಚನೆ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು.
ಫೆಡ್ ಗವರ್ನರ್ ಅವರನ್ನು ತೆಗೆದುಹಾಕಲು ಅನುಮತಿಸುವ ಫೆಡರಲ್ ಕಾನೂನನ್ನು ಟ್ರಂಪ್ ಉಲ್ಲಂಘಿಸಿದ್ದಾರೆ ಎನ್ನುವುದು ಲೀಸಾ ಕುಕ್ ಅವರ ಆರೋಪ.