7 rupees

News @ your fingertips

ಫಸ್ಟ್ ಕ್ರೈ ಐಪಿಒ ಬ್ಯಾಂಡ್ ಫಿಕ್ಸ್ , ಸಚಿನ್ ಹೂಡಿಕೆ ನಷ್ಟದಲ್ಲಿ


ಸಣ್ಣ ಮಕ್ಕಳ , ಗರ್ಭಿಣಿಯರ ಉಡುಗೆತೊಡುಗೆ , ಆಟದ ಪರಿಕರ ಹಾಗೂ ಇನ್ನಿತರ ಉತ್ಪನ್ನಗಳ ಫಸ್ಟ್ ಕ್ರೈ ಸಂಸ್ಥೆಯ ಐಪಿಒ ಆಗಸ್ಟ್ 6ರಂದು ತೆರೆಯಲಿದ್ದು , 440 ರೂ.ಯಿಂದ 465 ರೂ. ದರ ಪಟ್ಟಿ ನಿಗದಿಪಡಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಂಡ ಇ- ಕಾಮರ್ಸ್ ಯೂನಿಕಾನ್ ಫಸ್ಟ್ ಕ್ರೈ ಸಂಸ್ಥೆಯಲ್ಲಿ ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್ , ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ , ಮಹಿಂದ್ರಾ ಸಮೂಹ , ಮಣಿಪಾಲ ಸಮೂಹದ ಡಾ ರಂಜನ್ ಪೈ , ವಿಪ್ರೋ ಸಮೂಹದ ಅಜೀಜ್ ಪ್ರೇಮ್‌ಜಿ ಮತ್ತಿತರ ಪ್ರಮುಖರು ಈ ಸಂಸ್ಥೆಯಲ್ಲಿ ಈಗಾಗಲೇ ಹೂಡಿಕೆ ಹೊಂದಿದ್ದಾರೆ.
ರತನ್ ಟಾಟಾ ಸರಾಸರಿ 84.72 ರೂ.ಗಳಿಗೆ 77900 ಷೇರುಗಳನ್ನು ಹೊಂದಿದ್ದರೆ , ಮಹೀಂದ್ರಾ ಸಮೂಹ ಸಂಸ್ಥೆ ಶೇ.11ರಷ್ಟು ಷೇರುಗಳನ್ನು 77.96 ರೂ.ಗಳಿಗೆ ಖರೀದಿಸಿತ್ತು.
ಕಳೆದ ವರ್ಷವಷ್ಟೇ ಕ್ರಿಕೆಟಗ ಸಚಿನ್ ತೆಂಡುಲ್ಕರ ಅವರ ಪತ್ನಿ ಅಂಜಲಿ 2ಲಕ್ಷ ಷೇರುಗಳನ್ನು , ಮಣಿಪಾಲದ ಡಾ ರಂಜನ್ ಪೈ 51.3 ಲಕ್ಷ ಷೇರುಗಳನ್ನು ಸರಾಸರಿ 487.44 ರೂ.ಗಳಿಗೆ ಖರೀದಿಸಿದ್ದರು. ಈಗ ಐಪಿಒನಲ್ಲಿ ಪ್ರತಿ ಷೇರಿನ ಬೆಲೆ ಕಡಿಮೆ ನಿಗದಿಯಾಗಿರುವ ಕಾರಣ ಅವರ ಹೂಡಿಕೆಯು ಸುಮಾರು ಶೇ. 5ರಷ್ಟು ನಷ್ಟಕ್ಕೆ ಸಿಲುಕಿದೆ.
ರತನ್ ಟಾಟಾ ಸುಮಾರು 5ಪಟ್ಟು ಗಳಿಕೆ ಮಾಡಿದರೆ, ಮಹೀಂದ್ರಾ ಸಮಾಹ ಸಂಸ್ಥೆ 6 ಪಟ್ಟು ಲಾಭದಲ್ಲಿದೆ.
ರತನ್ ಟಾಟಾ ತನ್ನ ಪಾಲನ್ನು ಮಾರಾಟಕ್ಕೆ ಮುಂದಾಗಿದ್ದಾರೆ.
ವಿಪ್ರೋದ ಅಜೀಜ್ ಪ್ರೇಮ್‌ಜಿ ಅವರ ಫ್ಯಾಮಿಲಿ ಟ್ರಸ್ಟ್ ನ ಎರಡು ಫಂಡ್ ಮೂಲಕ ಫಸ್ಟ್ ಕ್ರೈನಲ್ಲಿ ಶೇ 10.3 ಷೇರುಗಳನ್ನು ಹೊಂದಿದ್ದು ,ಅವುಗಳ ಸರಾಸರಿ ಖರೀದಿ ದರ 280.87 ರೂ. ಅಂದರೆ ಪ್ರೇಮ್‌ಜಿ ಸದ್ಯ ಸುಮಾರು ಶೇ.57ರಷ್ಟು ಲಾಭದಲ್ಲಿದ್ದಾರೆ.

 

.