7 rupees

News @ your fingertips

ಪ್ರೀಮಿಯಂ ಸಂಗ್ರಹ ಎಲ್‌ಐಸಿ ದಾಖಲೆ

ದೇಶದ ಅತೀ ದೊಡ್ಡ ವಿಮಾ ಕಂಪೆನಿ ಎಲ್‌ಐಸಿ ಕಳೆದ ಎಪ್ರಿಲ್ ತಿಂಗಳಲ್ಲಿ 12384 ಕೋ.ರೂ.ಗಳ ಪ್ರೀಮಿಯಂ ಸಂಗ್ರಹ ಮಾಡಿದೆ.
ಇದು 2014ರಿಂದ ಈಚೆಗೆ ಸಂಗ್ರಹವಾದ ಅತಿ ದೊಡ್ಡ ಮೊತ್ತವಾಗಿದೆ. ಕಳೆದ ವರ್ಷ ಇದೇ ತಿಂಗಳು ಸಂಗ್ರಹವಾದ ಮೊತ್ತ 5810.10 ಕೋ.ರೂ. ಇದಕ್ಕೆ ಹೋಲಿಸಿದರೆ ಈ ಬಾರಿಯ ಪ್ರೀಮಿಯಂ ಶೇ.113.14ರಷ್ಟು ಹೆಚ್ಚಾಗಿದೆ.
ಎಪ್ರಿಲ್‌ನಲ್ಲಿ 3175.47 ಕೋ.ರೂ. ಪ್ರೀಮಿಯಂ ವೈಯಕ್ತಿಕ ಪಾಲಿಸಿ ವಿಭಾಗದಲ್ಲಿ ಸಂಗ್ರಹವಾಗಿದೆ. ಹಿಂದಿನ ಸಾಲಿನಲ್ಲಿ ಹೋಲಿಸಿದರೆ ಇದು ಶೇ. 25.17ರಷ್ಟು ಅಧಿಕ.ಈ ಅವಧಿಯಲ್ಲಿ ಗುಂಪು ಪಾಲಿಸಿ ಪ್ರೀಮಿಯಂ 9141.34 ಕೋ.ರೂ. ಸಂಗ್ರಹವಾಗಿದ್ದು , ಹಿಂದಿನ ಅವಧಿಗೆ ಹೋಲಿಸಿದರೆ ಶೇ. 182.16 ರಷ್ಟು ಹೆಚ್ಚಳ ಎಂದು ಪ್ರಕಟನೆ ತಿಳಿಸಿದೆ.

× Subscribe us