News @ your fingertips
News @ your fingertips
ಅಟೋ ಕ್ಷೇತ್ರದಲ್ಲಿ ಇತರ ಪ್ರತಿಸ್ಪರ್ಧಿ ಕಂಪೆನಿಗಳಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ರಾಯಲ್‌ಎನ್‌ಫೀಲ್ಡ್ ಮುಂದಿನ ದಿನಗಳಲ್ಲಿ ಪ್ರೀಮಿಯಂ ಮೋಟರ್‌ಸೈಕಲ್‌ವಲಯಕ್ಕೆ ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಿದೆ.
ರಾಯಲ್‌ಎನ್‌ಫೀಲ್ಡ್ ಬ್ರಾಂಡ್‌ನ ಮಾತೃ ಸಂಸ್ಧೆಯಾಗಿರುವ ಐಷರ್ ಮೋಟಾರ್ಸ್ ಲಿಮಿಟೆಡ್‌ನ ಎಂಡಿ ಹಾಗೂ ಸಿಇಒ ಸಿದ್ಧಾರ್ಥಲಾಲ್ ಸುದ್ದಿಗಾರರೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ.ಕಳೆದ ಕೆಲವು ಸಮಯದಿಂದ ಮಧ್ಯಮ ತೂಕದ ಮೋಟಾರ್ಸ್ ವಿಭಾಗದಲ್ಲಿ ಹೀರೋ ಮೋಟೋಕಾಪ್,ಬಜಾಜ್‌ಆಟೋ,ಟಿವಿಎಸ್ ಮೋಟಾರ್ಸ್ ಕಂಪೆನಿಗಳಿಂದ ಸ್ಪರ್ಧೆ ಜಾಸ್ತಿಯಾಗುತ್ತಿದೆ.250-750 ಸಿಸಿ ಮಾದರಿಯ ಬೈಕ್‌ವಿಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಪರ್ಧೆ ಎದುರಾಗುತ್ತಿದೆ. ಇದು ಮಾರುಕಟ್ಟೆಯನ್ನು ವಿಸ್ತರಿಸುವುದು ಮಾತ್ರವಲ್ಲದೆ, ಪ್ರೀಮಿಯಂ ಮೋಟಾರ್‌ವಿಭಾಗದಲ್ಲಿ ಅದ್ಯತೆ ಕೂಡಾ ಬದಲಾಗುತ್ತಿದೆ.ಹಾಗಾಗಿ ಸ್ಪರ್ಧೆಯನ್ನು ಎದುರಿಸಲು ನಾವು ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ವಿವರಿಸಿದರು.
ಸದ್ಯ ರಾಯಲ್‌ಎನ್‌ಫೀಲ್ಡ್ ಬೈಕ್‌ಗಳಿಗೆ ವಿಚಾರಣೆ,ಬುಕ್ಕಿಂಗ್ ವೃದ್ಧಿಸುತ್ತಿದೆ. ಅದರೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದಂತೆ ರಾಯಲ್ ಎನ್‌ಫೀಲ್ಡ್ ಕುರಿತಂತೆ ನಾವು ಹೆಚ್ಚು ಗಮನ ನೀಡುವುದು, ಗ್ರಾಹಕರಿಗೆ ಅರಿವು ಮಾಡುವುದನ್ನು ಮಾಡಬೇಕಿದೆ ಎಂದು ಅವರು ಹೇಳಿದರು.
ಸದ್ಯ ರಾಯಲ್‌ಎನ್‌ಫೀಲ್ಡ್ 250-750 ಸಿಸಿ ಮಾದರಿ ಬೈಕ್‌ವಿಭಾಗದಲ್ಲಿ ಶೇ.85 ಮಾರುಕಟ್ಟೆ ಪಾಲನ್ನು ಹೊಂದಿದೆ.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ