News @ your fingertips
News @ your fingertips
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ನಿಂದ ತುರ್ತು ಕಾರ್ಯಗಳಿಗೆ ಮುಂಗಡ ಹಣ ಪಡೆಯುವ ಆಟೋ ಕ್ಲೈಮ್ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಪಿಎಫ್‌ಒ ಎಲ್ಲಾ ಮುಂಗಡ ಕ್ಲೈಮ್‌ಗಳಿಗೆ ಆಟೋ ಕ್ಲೈಮ್ ಇತ್ಯರ್ಥದ ಮಿತಿಯನ್ನು 5ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದು ತುರ್ತು ಅಗತ್ಯಗಳಿಗಾಗಿ ಹಣವನ್ನು ಬಳಸಿಕೊಳ್ಳಲು ಬಯಸುವ ಇಪಿಎಫ್‌ಒ ಸದಸ್ಯರಿಗೆ ಅನುಕೂಲವಾಗಲಿದೆ. ಈ ಹಿಂದೆ 1ಲಕ್ಷ ರೂ. ಮಿತಿ ವಿಧಿಸಲಾಗಿತ್ತು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸೂಖ್ ಮಾಂಡವಿಯಾ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಹೇಳಿದೆ.
ಕೊರೊನಾ ರೋಗದ ಬಳಿಕ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಮುಂಗಡ ಕ್ಲೈಮ್‌ಗಳ ಸ್ವಯಂ-ಇತ್ಯರ್ಥವನ್ನು ಪ್ರಾರಂಭಿಸಿತ್ತು. ಇದರಿಂದಾಗಿ ನೌಕರರು ಸುಲಭದಲ್ಲಿ ತಮ್ಮ ಭವಿಷ್ಯ ನಿಧಿಯಿಂದ ಹಣವನ್ನು ಮುಂಗಡವಾಗಿ ಪಡೆಯಲು ಅನುಕೂಲವಾಗಿತ್ತು.
.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ