7 rupees

News @ your fingertips

ನಿಮ್ಮ ಆರೋಗ್ಯಕ್ಕೊಂದು ಪಾಲಿಸಿ ನೆಮ್ಮದಿ ಜೀವನಕ್ಕೆ ಹಾದಿ

ಆರೋಗ್ಯ ವಿಮೆ ನಿಜಕ್ಕೂ ಅಗತ್ಯನಾ ? ಯಾರೆಲ್ಲ ವಿಮೆ ಮಾಡಿಸಿಕೊಳ್ಳಬೇಕು ? ಲಾಭ ಏನು ? ಆಯ್ದುಕೊಳ್ಳುವಾಗ ಎಚ್ಚರಿಕೆಯೂ ಅಗತ್ಯ

ಜೀವ ವಿಮೆಯಂತೆ ಆರೋಗ್ಯ ವಿಮೆಯೂ ಅಗತ್ಯವೇ ಎನ್ನುವುದು ಬಹಳಷ್ಟು ಮಂದಿಯ ಪ್ರಶ್ನೆ.
ಹೌದು, ಇಂದಿನ ದಿನಗಳಲ್ಲಿ ಜೀವ ವಿಮೆ ಸೇರಿದಂತೆ ಎಲ್ಲ ಬಗೆಯ ವಿಮೆಗಳು ಒಂದು ರೀತಿಯಲ್ಲಿ ಅನಿವಾರ್ಯವಾಗಿ ಬಿಟ್ಟಿದೆ.
ಆರೋಗ್ಯ ವಿಮೆ, ಪ್ರಯಾಣ ವಿಮೆ, ಸರಕು ವಿಮೆ, ಕಟ್ಟಡ ವಿಮೆ,ವಾಹನ ವಿಮೆ, ಬೆಳೆ ವಿಮೆ, ಆಭರಣ ವಿಮೆ … ವ್ಯವಹಾರಿಕ ಜಗತ್ತಿನಲ್ಲಿ ಇಂದು ವಿಮೆ ತನ್ನ ವ್ಯಾಪ್ತಿಯನ್ನು ಬಹಳಷ್ಟು ವಿಸ್ತರಿಸಿಕೊಳ್ಳುತ್ತಿದೆ.
ಆರೋಗ್ಯ ವಿಮೆ ಇಂದು ಎಲ್ಲ ಪ್ರಾಯದವರಿಗೆ ಅಗತ್ಯಯೆನ್ನುವುದು ಸ್ಪಷ್ಟ. ನಿಶ್ಚಿಂತೆಯಿಂದ ಬದುಕು ಸಾಗಿಸುವ ಸಲುವಾಗಿಯಾದರೂ ವಿಮೆಯನ್ನು ಪಡೆಯುವುದು ಅನಿವಾರ್ಯವಾಗಿದೆ.ಯುವಕರಾಗಿದ್ದಾಗ ಆರೋಗ್ಯ ವಿಮೆಯ ಅವಶ್ಯತೆ ಹಚ್ಚೇನು ಕಂಡ ಬರಲಿಕ್ಕಿಲ್ಲ, ಆದರೆ ಹಿರಿಯರಿಗಂತೂ ಬಹು ಅಗತ್ಯ.
ಮುಖ್ಯವಾಗಿ ನಿವೃತ್ತಿಯ ಬಳಿಕ ಆದಾಯ ಮೂಲವೂ ಹೇಳವಷ್ಟು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ರಕ್ಷಣೆಗೆ ಬರುವುದು ವಿಮೆ ಮಾತ್ರ.
ಯಾವುದೇ ರೋಗರುಜಿನಗಳು ಹೇಳಿಕೇಳಿ ಬರುವುದಿಲ್ಲ. ಬಂದ ಬಳಿಕ ಅವುಗಳ ಚಿಕಿತ್ಸಾ ವೆಚ್ಚ ಭರಿಸುವುದೇ ದೊಡ್ಡ ಸವಾಲಾಗುತ್ತದೆ. ಹೊಸ ಹೊಸ ತಂತ್ರಜ್ಞಾನಗಳು, ಔಷಧಿಗಳು ಮಾರುಕಟ್ಟೆ ತಲುಪುತ್ತಿದ್ದಂತೆ ಅವುಗಳ ನೇರ ಹೊರೆ ಬೀಳುವುದು ರೋಗಿಗಳ ಮೇಲೆಯೇ. ಹಾಗಾಗಿ ಜನರು ಆಸ್ಪತ್ರೆ ಎಂದ ಕೂಡಲೇ ಭಯ ಪಡುವಂತಾಗಿದೆ. ಅಧಿಕಗೊಳ್ಳುತ್ತಿರುವ ಚಿಕಿತ್ಸಾ ವೆಚ್ಚಗಳು ಬಹಳಷ್ಟು ಸಲ ರೋಗಿ ಹಾಗೂ ಅವರ ಪರಿವಾರದವರನ್ನು ಕಂಗಾಲು ಮಾಡಿಬಿಡುತ್ತದೆ. ಇಂತಹ ತುರ್ತು ಸಂದರ್ಭದಲ್ಲಿ ನೆರವಿಗೆ ಬರುವುದು ಅರೋಗ್ಯ ವಿಮೆ.
ಈ ಆರೋಗ್ಯ ವಿಮೆಯನ್ನು ಪಡೆಯುವುದು ಹೇಗೆ ?
ವಿಮೆಯನ್ನು ಯಾರು ಪಡೆಯಬೇಕು ಹಾಗೂ ಯಾವಾಗ ಪಡೆಯಬೇಕು ಅನ್ನುವುದು ಮುಖ್ಯ.
ಸದ್ಯದ ಮಾರುಕಟ್ಟೆಯಲ್ಲಿ ಹಲವಾರು ಕಂಪೆನಿಗಳ ಹಲವು ಬಗೆಯ ವಿಮೆಗಳು ಲಭ್ಯವಿದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಆಯ್ದುಕೊಳ್ಳುವುದರಲ್ಲಿ ಜಾಣತನ ಅಡಗಿದೆ.
ಕೆಲವೊಂದು ರೋಗಗಳನ್ನು ಪಾಲಿಸಿಯಿಂದ ಹೊರಗಿಡಲಾಗಿದೆ. ಕೆೆಲವು ಕಂಪೆನಿಗಳು ಅಧಿಕ ಪ್ರೀಮಿಯಂ ಪಡೆದು ಪಾಲಿಸಿ ನೀಡುವುದುಂಟು.
ಕಡಿಮೆ ವಯಸ್ಸಿನಲ್ಲೇ ವಿಮೆ ಮಾಡಿಕೊಳ್ಳುವುದು ಅತ್ಯಂತ ಬುದ್ದಿವಂತಿಕೆ. ಪ್ರಾಯ ಕಡಿಮೆ ಇದ್ದಾಗ ಕಟ್ಟುವ ಪ್ರೀಮಿಯಂ ಮೊತ್ತ ಅತ್ಯಂತ ಕಡಿಮೆ ಇರುತ್ತದೆ. ಅದರೆ ಇಳಿ ವಯಸ್ಸಿನಲ್ಲಿ ವಿಮೆ ಪಾಲಿಸಿಗೆ ದೊಡ್ಡ ಮೊತ್ತದ ಪ್ರೀಮಿಯಂ ನೀಡಬೇಕಾಗುತ್ತದೆ. ಅದು ಕಷ್ಟವೆನಿಸುವುದಿದೆ. ಹಲವು ಕಂಪೆನಿಗಳು ಪ್ರೀಮಿಯಂ ತಿಂಗಳಿಗೊಮ್ಮೆ ಪಾವತಿಸುವ ಕಂತಿನ ಅವಕಾಶವನ್ನು ನೀಡುತ್ತಿವೆ.
ಆರೋಗ್ಯ ವಿಮೆ ಅನ್ನೋದು ಒಂದು ರೀತಿಯಲ್ಲಿ ಜೀವ ರಕ್ಷಕ. ಹಾಗಾಗಿ ಇದನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಅಗತ್ಯ ಕೂಡಾ.
ಈಗ ಎಲ್ಲ ಪಾಲಿಸಿ ಹಾಗೂ ಇನ್ನಿತರ ವಿವರಗಳು ಅನ್‌ಲೈನ್‌ನಲ್ಲಿ ಲಭ್ಯ. ಕೆಲವು ಸಂಸ್ಥೆಗಳು ಆನ್‌ಲೈನ್‌ನಲ್ಲಿ ಕಡಿಮೆ ಪ್ರೀಮಿಯಂಗೂ ಮಾರಾಟ ಮಾಡುವ ತಂತ್ರವನ್ನು ಅನುಸರಿಸುತ್ತಿವೆ.
ಪಾಲಿಸಿಯನ್ನು ಪಡೆಯುವ ಹೊತ್ತಿಗೆ ಸರಿಯಾದ ವಿವರಗಳನ್ನು ಪಡೆಯುವುದು ಅತಿ ಮುಖ್ಯ.
ಪಾಲಿಸಿಗೆ ಸರಿಯಾದ ವೈಯಕ್ತಿಕ ಮಾಹಿತಿಗಳನ್ನು ಒದಗಿಸುವುದು ಕೂಡಾ ಅಷ್ಟೇ ಅಗತ್ಯ. ತಪ್ಪು ಮಾಹಿತಿಗಳು ಪಾಲಿಸಿ ಕ್ಲೈಮ್‌ನಲ್ಲಿ ಸಮಸ್ಯೆಯನ್ನು ಒಡ್ಡುವ ಸಾಧ್ಯತೆಗಳೇ ಅಧಿಕ.

 

× Subscribe us