ನಿಫ್ಟಿ ಸೋಮವಾರ ಬಹುತೇಕ 25 ಸಾವಿರ ಗುರಿಯನ್ನು ತಲುಪಿ , ಸರ್ವಕಾಲಿನ ಗರಿಷ್ಟ ಮಟ್ಟವನ್ನು ದಾಖಲಿಸಿದೆ.
ಆರಂಭದಿಂದಲೇ ಪಾಸಿಟಿವ್ ಆಗಿ ಆರಂಭಗೊಂಡ ಮಾರುಕಟ್ಟೆಯಲ್ಲಿ ಏರಿಳಿತದ ನಡುವೆ ನಿಫ್ಟಿ 24999.75 ಅಂಕಗಳಿಗೆ ತಲುಪಿ , ಕೆಳಗಿಳಿಯಿತು. ಜಸ್ಟ್ 0.25 ಅಂಕದಿಂದ 25 ಸಾವಿರ ಗಡಿಯನ್ನು ದಾಟದೆ, ಹಿಂಜರಿಕೆ ಕಂಡಿತು.
25 ಸಾವಿರದ ಗರಿಷ್ಟ ಮಟ್ಟದಲ್ಲಿ ಪ್ರಾಫಿಟ್‌ಬುಕ್ಕಿಂಗ್ ಆರಂಭವಾದ ಕಾರಣಕ್ಕೆ ನಂತರ ಹಾವು ಏಣಿಯಾಟ ನಡೆಯಿತು.
ಮಾರುಕಟ್ಟೆ ಈ ಮಟ್ಟದಲ್ಲಿ ಸ್ಥಿರವಾಗಿ ಮೇಲೇರುವುದೇ ಅಥವಾ ಒಂದಿಷ್ಟು ಕರೆಕ್ಷನ್ ಬರಲಿದೆಯೇ ಎನ್ನುವುದು ಸದ್ಯದ ಪ್ರಶ್ನೆ . ಯಾಕೆಂದರೆ , 25 ಸಾವಿರ ಗಡಿ ಮಾನಸಿಕವಾಗಿ ಒಂದಿಷ್ಟು ಪ್ರಭಾವನ್ನು ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಮಾರುಕಟ್ಟೆ ತಜ್ಞರ ಪ್ರಕಾರ , ಮುಂದಿನ ದಿನಗಳಲ್ಲಿ ಒಂದಿಷ್ಟು ಕರೆಕ್ಷನ್ ಬರುವ ಸಾಧ್ಯತೆಗಳಿವೆ. ಅದರೆ ಮಧ್ಯಾವಧಿ ಹಾಗೂ ದೀಘಾವಧಿ ಟ್ರೆಂಡ್‌ಪಾಸಿಟಿವ್ ಆಗಿದೆ.
ಈ ವರ್ಷದಲ್ಲಿ ಇದುವರೆಗೆ ನಿಫ್ಟಿ ಶೇ.14ರಷ್ಟು ಏರಿಕೆಯನ್ನು ಕಂಡಿದೆ. ಇದರ ಜೊತೆಯಲ್ಲಿ ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸೂಚ್ಯಂಕ ಕೂಡಾ ದೊಡ್ಡ ಮಟ್ಟದ ಗಳಿಕೆ ಪಡೆದಿದೆ. ನಿಫ್ಟಿ ಮಿಡ್‌ಕ್ಯಾಪ್ 15 ಇಂಡೆಕ್ಸ್ ಹಾಗೂ ನಿಫ್ಟಿ ಸ್ಮಾಲ್‌ಕ್ಯಾಪ್ 250 ಇಂಡೆಕ್ಸ್ ಕೂಡಾ ಶೇ.27 ರಷ್ಟು ಏರಿಕೆ ದಾಖಲಿಸಿದೆ.
ಇತ್ತೀಚಿನ ವರ್ಷಗಳಲ್ಲಿ ರಿಟೇಲ್ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಷೇರು ಮಾರುಕಟ್ಟೆಯಲ್ಲಿ ತೊಡಗಿರುವುದು ಈ ರೀತಿಯ ಏರಿಕೆಗೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತ ಮಾರುಕಟ್ಟೆ ಮುಂದಿನ ದಿನಗಳಲ್ಲಿ ಗರಿಷ್ಟ ಮಟ್ಟದಲ್ಲಿ ಲಾಭ ತಂದುಕೊಡಲಿದೆ ಎನ್ನುವ ನಿರೀಕ್ಷೆಯೇ ರಿಟೇಲ್ ಹೂಡಿಕೆದಾರರನ್ನು ಮಾರುಕಟ್ಟೆಯತ್ತ ಆಕರ್ಷಿಸಲು ಕಾರಣ.
ಭಾರತದ ಅರ್ಥಿಕತೆ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಪ್ರಗತಿಯನ್ನು ತೋರಿರುವುದು ಇದಕ್ಕೆ ಮುಖ್ಯ ಕಾರಣ.
ಭಾರತದ ಮಾರುಕಟ್ಟೆಯ ಬಗ್ಗೆ ಹೂಡಿಕೆದಾರರು ಎಷ್ಟು ನಂಬಿಕೆ ಹೊಂದಿದ್ದಾರೆ ಎಂದರೆ , ಈಗಲೂ ಪ್ರತಿ ವಾರ 8-10 ಲಕ್ಷ ಹೊಸ ಹೂಡಿಕೆದಾರರು ಮಾರುಕಟ್ಟೆಗೆ ಸೇರ್ಪಡೆಯಾಗುತ್ತಿದ್ದಾರೆ. ಬಿಎಸ್‌ಸಿ ಡಾಟಾ ಪ್ರಕಾರ , ಈಗಾಗಲೇ ಹೂಡಿಕೆದಾರರ ಸಂಖ್ಯೆ 18.3 ಕೋಟಿ ದಾಟಿದೆ. ಕಳೆದ 12 ತಿಂಗಳಲ್ಲಿ ಸುಮಾರು 4 .6 ಕೋಟಿ ಹೊಸ ಹೊಡಿಕೆದಾರರು ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ ಎನ್ನುತ್ತಾರೆ ತಜ್ಞರು.
ಈ ಎಲ್ಲ ಬೆಳವಣಿಕೆಗಳು ಮಾರುಕಟ್ಟೆಯ ದೃಷ್ಟಿಯಿಂದ ಪಾಸಿಟಿವ್ ಸೂಚನೆಗಳಾದರೂ , ಬೇರೆ ಬೇರೆ ವಿದ್ಯಮಾನಗಳು ಮಾರುಕಟ್ಟೆ ಮೇಲೆ ಪರಿಣಾಮವಾಗುವ ಕಾರಣ ಹೂಡಿಕೆ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯ.
News @ your fingertips
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ