News @ your fingertips
News @ your fingertips
ಭಾರತದ ಆರ್ಥಿಕತೆಯು ಬೆಳವಣಿಗೆ ಹಿಂದಿನ ವರ್ಷದ ಶೇ. 6.5 ಕ್ಕೆ ಹೋಲಿಸಿದರೆ 2026 ರಲ್ಲಿ ಶೇ. 6.3 ರಷ್ಟಿರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ವಿಶ್ವ ಬ್ಯಾಂಕ್ ಮುಂಬರುವ ವರ್ಷದ ಬಗ್ಗೆ ಹೆಚ್ಚು ಆಶಾವಾದನ್ನು ಹೊಂದಿತ್ತು. ಸೇವಾ ವಲಯದಲ್ಲಿ ಹೆಚ್ಚಿರುವ ಚಟುವಟಿಕೆಗಳು ಹೆಚ್ಚಿನ ರಫ್ತುಗಳಿಗೆ ಕಾರಣವಾಗುವ ಕಾರಣ 2026 ರಲ್ಲಿ ಶೇ. 6.5 ಮತ್ತು 2027 ರಲ್ಲಿ ಶೇ. 6.7 ರಷ್ಟು ಬೆಳವಣಿಗೆಯನ್ನು ಅದು ನಿರೀಕ್ಷಿಸಿತ್ತು.
ಆದರೆ ಇತ್ತೀಚಿನ ಬೆಳವಣಿಗೆಗಳು ಅಂದಾಜನ್ನು ಕುಸಿಯುವಂತೆ ಮಾಡಿದೆ. ಆದರೂ ಈ ಕುಸಿತದ ಹೊರತಾಗಿಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎನ್ನುವ ಟ್ಯಾಗ್ ಅನ್ನು ಉಳಿಸಿಕೊಳ್ಳುತ್ತದೆ ಎಂದು ವಿಶ್ವಬ್ಯಾಂಕ್ ವಿವರಿಸಿದೆ.
ಜನವರಿಯ ಅಂದಾಜಿಗೆ ಹೋಲಿಸಿದರೆ ಸದ್ಯ 2025-26 ರಲ್ಲಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ 0.4 ರಷ್ಟು ಕಡಿತಗೊಳಿಸಲಾಗಿದೆ. ಪ್ರಮುಖ ವ್ಯಾಪಾರ ಪಾಲುದಾರರಲ್ಲಿನ ದುರ್ಬಲ ಚಟುವಟಿಕೆ ಮತ್ತು ಹೆಚ್ಚುತ್ತಿರುವ ಜಾಗತಿಕ ವ್ಯಾಪಾರ ಅಡೆತಡೆಗಳಿಂದ ರಫ್ತುಗಳು ಕುಂಠಿತಗೊಂಡಿವೆ ಎಂದು ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ