News @ your fingertips
News @ your fingertips
ಇಂಡಿಗೋ ವಿಮಾನಗಳ ಹಾರಾಟದಲ್ಲಿ ಉಂಟಾಗಿರುವ ಅಡಚಣೆಗಳು ಮುಂದುವರಿಯುತ್ತಿದ್ದಂತೆ ವಿಮಾನ ದರಗಳು ಗಗನಕ್ಕೆರುತ್ತಿದ್ದು , ಅದನ್ನು ನಿಯಂತ್ರಿಸಲು ಕೇಂದ್ರ ಸರಕಾರ ಮುಂದಾಗಿದೆ.
ದರ ಏರಿಕೆ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಅಂತರಿಕ ವಿಮಾನ ಯಾನ ದರವನ್ನು 18,000 ರೂ. (ಸೇವಾ ಶುಲ್ಕ, ತೆರಿಗೆಗಳನ್ನು ಹೊರತುಪಡಿಸಿ) ಗೆ ಮಿತಿಗೊಳಿಸಿ ಆದೇಶಿಸಿದೆ.
ಇದು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ವಿಮಾನ ಯಾನ ದರಗಳು ಸ್ಥಿರವಾಗುವವರೆಗೆ ಅಥವಾ ಮುಂದಿನ ಪರಿಶೀಲನೆಯವರೆಗೆ ಅನ್ವಯಿಸಲಿದೆ ಎಂದು ಪ್ರಕಟನೆ ತಿಳಿಸಿದೆ. ಆದರೆ ಈ ಮಿತಿಯು ಬಿಸಿನೆಸ್ ಕ್ಲಾಸ್ ಮತ್ತು ಉಡಾನ್ ವಿಮಾನ ಯಾನಗಳಿಗೆ ಅನ್ವಯವಾಗುವುದಿಲ್ಲ.
ಭಾರತದಾದ್ಯಂತ ಇಂಡಿಗೋ ಕಾರ್ಯಾಚರಣೆಗಳು ಸತತ ಐದನೇ ದಿನವಾದ ಶನಿವಾರವೂ ಭಾರಿ ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡಿದೆ. ಇಂಡಿಗೋ ವಿರುದ್ದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಅಕ್ರೋಶ ವ್ಯಕ್ತಪಡಿಸುವ ದೃಶ್ಯಗಳು ಸಾಮಾನ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗುತ್ತಿವೆ. ಕೆಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆಗಳನ್ನು ಕಲ್ಪಿಸಲು ಸ್ಥಳೀಯ ನಿಲ್ದಾಣ ಅಡಳಿತ ಪ್ರಯತ್ನಿಸುತ್ತಿದೆ.
ಶನಿವಾರ ಕೂಡಾ 400 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಮುಂಬೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಮುಂದಿನ ಪ್ರಯಾಣ ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?