ದೆಹಲಿ ನಗರಕ್ಕೆ ಮತ್ತೆ ವಾಯುಮಾಲಿನ್ಯದ ಭೀತಿ ಎದುರಾಗುತ್ತಿದೆ. ದೇಶದ ರಾಜಧಾನಿಯಲ್ಲಿ ಆರೋಗ್ಯ ಅಪಾಯ ಮುಂದುವರಿಯುತ್ತಿದೆ. 2023 ರಲ್ಲಿ ದೆಹಲಿ ನಗರ ಅಸುಪಾಸಿನಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಸುಮಾರು ಶೇ.15ರಷ್ಟು ಮಾಲಿನ್ಯದ ಪರಿಣಾಮದಿಂದಾಗಿರುವುದು ಎಂದು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಜಿಡಿಬಿ ) ಪ್ರಕಟಿಸಿರುವ ದತ್ತಾಂಶಗಳು ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯೂಯೇಷನ್ (ಐಎಚ್ಎಂಇ) ಬಿಡುಗಡೆ ಮಾಡಿದ ಜಿಡಿಬಿ 2023ರ ದತ್ತಾಂಶವನ್ನು ಆಧರಿಸಿದ ವಿಶ್ಲೇಷಣೆಯಲ್ಲಿ ಈ ಅಘಾತಕಾರಿ ವಿಷಯ ಹೊರಬಿದ್ದಿದೆ. ಅತಿಯಾಗಿರುವ ಮಾಲಿನ್ಯದಿಂದ ಆ ವರ್ಷ ದೆಹಲಿಯಲ್ಲಿ ಸುಮಾರು 17,188 ಸಾವುಗಳು ಸಂಭವಿಸಿವೆ ಎಂದು ವರದಿ ವಿವರಿಸಿದೆ.
ನಗರದಲ್ಲಿ ಸಂಭವಿಸುವ ಪ್ರತಿ ಏಳು ಸಾವುಗಳಲ್ಲಿ ಒಂದು ಕಲುಷಿತ ಗಾಳಿಯಿಂದ ಸಂಭವಿಸಿದೆ.
ಈ ನಡುವೆ ಈ ವರದಿಯನ್ನು ನಿರಾಕರಿಸಿರುವ ಕೇಂದ್ರ ಸರಕಾರ ವಾಯು ಮಾಲಿನ್ಯ ಮತ್ತು ಸಾವುಗಳ ನಡುವೆ ನೇರ ಸಂಬಂಧವನ್ನು ಸ್ಥಾಪಿಸಲು ಯಾವುದೇ ನಿರ್ಣಾಯಕ ದತ್ತಾಂಶ ಲಭ್ಯವಿಲ್ಲ ಎಂದು ಸ್ಪಷ್ಟೀಕರಿಸಿದೆ.
ಜಿಡಿಬಿ ಅಧ್ಯಯನವು ವಿಶ್ವದ ಅತ್ಯಂತ ಸಮಗ್ರ ಸಂಶೋಧನಾ ಯೋಜನೆಗಳಲ್ಲಿ ಒಂದಾಗಿದೆ, ಇದು ಎಲ್ಲಾ ದೇಶಗಳಲ್ಲಿನ ಪರಿಸ್ಥಿತಿ , ಜನರ ಸಾವು , ಅವರ ಅನಾರೋಗ್ಯದ ಕಾರಣಗಳು , ವಯೋಮಿತಿ ಸೇರಿದಂತೆ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿದೆ.
ವಾಯು ಮಾಲಿನ್ಯದ ನಂತರ, 2023 ರಲ್ಲಿ ದೆಹಲಿಯಲ್ಲಿ ಸಾವುಗಳಿಗೆ ಕಾರಣವಾಗುವ ಇತರ ಪ್ರಮುಖ ಅಪಾಯಕಾರಿ ಅಂಶಳೆಂದರೆ ಅಧಿಕ ಸಿಸ್ಟೊಲಿಕ್ ರಕ್ತದೊತ್ತಡ (14,874 ಸಾವುಗಳು ಅಥವಾ ಶೇ.12.5), ಅಧಿಕ ಪ್ಲಾಸ್ಮಾ ಗ್ಲೂಕೋಸ್ ಅಥವಾ ಮಧುಮೇಹ (10,653 ಸಾವುಗಳು ಅಥವಾ ಶೇ.9 ), ಅಧಿಕ ಕೊಲೆಸ್ಟ್ರಾಲ್ (7,267 ಸಾವುಗಳು ಅಥವಾ ಶೇ.6 )
ಇತ್ತೀಚಿನ ಈ ಡೇಟಾವನ್ನು ವಿಶ್ಲೇಷಿಸಿದ ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ನ ಸಂಶೋಧಕರು, ವರ್ಷದಿಂದ ವರ್ಷಕ್ಕೆ ಏರಿಳಿತಗಳ ಹೊರತಾಗಿಯೂ, ಮಾಲಿನ್ಯದಿಂದಾಗುವ ಸಾವುಗಳು ನಿರಂತರವಾಗಿ ಹೆಚ್ಚುತ್ತಿವೆ. ಅಧಿಕ ರಕ್ತದೊತ್ತಡ ಅಥವಾ ಮಧುಮೇಹಕ್ಕೆ ಸಂಬಂಧಿಸಿದ ಸಾವುಗಳಿಗಿಂತ ಮಾಲಿನ್ಯ ದಿಂದಾಗುವ ಸಾವುಗಳು ಹೆಚ್ಚಿವೆ ಎಂದು ವಿವರಿಸಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?