7 rupees

News @ your fingertips

ಡೆಲಿವರಿ ಮತ್ತೆ ನಷ್ಟದಲ್ಲಿ

ಲಾಜಿಸ್ಟಿಕ್ ಕಂಪೆನಿ ಡೆಲಿವರಿ ಲಿಮಿಟೆಡ್ ಮಾರ್ಚ್‌ಗೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ 68.5 ಕೋ.ರೂ.ಗಳ ನಷ್ಟ ಅನುಭವಿಸಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪೆನಿ 159 ಕೋ.ರೂ. ನಷ್ಟ ಅನುಭವಿಸಿದ್ದು , ಈ ಬಾರಿ ಚೇತರಿಕೆ ಕಂಡು ಶೇ.57ರಷ್ಟು ನಷ್ಟ ಕಡಿಮೆ ಮಾಡಿಕೊಂಡಿದೆ.
ಕಳೆದ ಅವಧಿಯಲ್ಲಿ 1860 ಕೋ.ರೂ ಅದಾಯ ಬಂದಿದ್ದು , ಈ ಅವಧಿಯಲ್ಲಿ ಅದು ವೃದ್ಧಿಸಿದ್ದು, 2076 ಕೋ.ರೂ.ಗಳಾಗಿದೆ.
ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಸಂಸ್ಥೆ 2194 ಕೋ.ರೂ.ಗಳ ಅದಾಯ ಗಳಿಸಿದ್ದು, ಅಶ್ಚರ್ಯಕರ ರೀತಿಯಲ್ಲಿ 11.7 ಕೋ.ರೂ ಲಾಭವನ್ನೂ ದಾಖಲಿಸಿತ್ತು. 2021ರ ಬಳಿಕ ಇದು ಕಂಪೆನಿಯ ಉತ್ತಮ ಸಾಧನೆಯಾಗಿತ್ತು.
2024ನೇ ಆರ್ಥಿಕ ವರ್ಷ ಕಂಪೆನಿಗೆ ಅತ್ಯಂತ ಪ್ರಮುಖವಾಗಿದೆ.ಸೇವೆಯನ್ನು ನಿರಂತರವಾಗಿ ಉತ್ತಮಪಡಿಸಲು ನಾವು ಕಾರ್ಯಯೋಜನೆಯನ್ನು ರೂಪಿಸುತ್ತಿದ್ದೇವೆ. ಜೊತೆಯಲ್ಲಿ ಅದಾಯದತ್ತವೂ ಹೆಚ್ಚಿನ ಗಮನ ನೀಡುತ್ತಿದ್ದೇವೆ ಎಂದು ಕಂಪೆನಿಯ ಸಿಇಒ , ಎಂಡಿ ಸಾಹಿಲ್ ಬರುವಾ ಹೇಳಿದ್ದಾರೆ.

× Subscribe us