News @ your fingertips
News @ your fingertips
ಶೇ.42ರಷ್ಟು ಕುಸಿದಿರುವ ಸ್ಟಾಕ್
ಭಾರತದ ಅಟೋಮೊಬೈಲ್ ಉದ್ಯಮದ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಷೇರು ಕಳೆದ ಹಲವು ದಿನಗಳಿಂದ ಕುಸಿತವನ್ನು ಕಾಣುತ್ತಿದ್ದು , ಬುಧವಾರ 14 ತಿಂಗಳ ಕನಿಷ್ಟ ಮಟ್ಟವನ್ನು ದಾಖಲಿಸಿದೆೆ.
2023ಮಾಚ್‌ನಿಂದ ಏರುಗತಿಯಲ್ಲಿದ್ದ ಸ್ಟಾಕ್ ಕಳೆದ ಹಲವು ತಿಂಗಳಿಂದ ರಿವರ್ಸ್ ಗೇರಿನಲ್ಲಿದೆ. ಯಾವುದೇ ಗಳಿಕೆಯಿಲ್ಲದೆ ಸಾಮಾನ್ಯ ಹೂಡಿಕೆದಾರರಂತೂ ಪುಲ್ ಕಂಗಾಲು.
2024 ಜುಲೈಯಲ್ಲಿ 1176 ರೂ.ಗಳಿಗೆ ವಹಿವಾಟು ನಡೆಸುತ್ತಿದ್ದ ಈ ಷೇರುಗಳು ಬುಧವಾರ 667 ರೂ.ಗಳಿಗೆ (ಶೇ.4.45)ಇಳಿದಿವೆ. ಇದು 14 ತಿಂಗಳ ಕನಿಷ್ಟ ದರ.
ಗರಿಷ್ಟ ದರದಿಂದ ಶೇ.42ರಷ್ಟು ಇಳಿಕೆ ಕಂಡಿರುವ ಷೇರುಗಳು ಸಾಮಾನ್ಯ ಹೂಡಿಕೆದಾರರ ಪಾಲಿಗಂತೂ ದೊಡ್ಡ ಹೊಡೆತವನ್ನು ನೀಡಿವೆ. ಕಂಪೆನಿಯಲ್ಲಿ ರಿಟೇಲ್ ಹೂಡಿಕೆದಾರ ಪಾಲು ಶೇ.21.9.
2023 ಮಾರ್ಚ್ ನಿಂದ 2024 ಜುಲೈವರೆಗೆ ಪ್ರತಿ ಹಂತದಲ್ಲೂ ಗಳಿಕೆಯಲ್ಲೇ ಮುನ್ನಡೆಯುತ್ತಿದ್ದ ಈ ಸಾಕ್ಟ್ ನಂತರದ ದಿನಗಳಲ್ಲಿ ಇಳಿಕೆಯ ಹಾದಿಯನ್ನು ಹಿಡಿದಿದೆ. 6 ತಿಂಗಳ ಅಂತರದಲ್ಲಿ ಶೇ.42ರ ಕುಸಿತ ದಾಖಲಾಗಿದೆ. ಈ ಇಳಿಕೆಯು 4.2 ಲಕ್ಷ ಕೋಟಿ ಹೊಂದಿದ ಟಾಟಾ ಮೋಟಾರ್ಸ್‌ನ ಮಾರ್ಕೆಟ್ ಕ್ಯಾಪ್ ಅನ್ನು 2.52 ಲಕ್ಷ ಕೋಟಿಗೆ ಇಳಿಸಿದೆ. ಅಂದರೆ ಸುಮಾರು 1.8 ಲಕ್ಷ ಕೋಟಿ ನಷ್ಟ ಕಂಡಿದೆ.
ಕಂಪೆನಿಯು ಮಾರುಕಟ್ಟೆಯ ನಿರೀಕ್ಷೆಯಷ್ಟು ಸಾಧನೆ ತೋರದಿರುವುದೇ ಷೇರುಗಳು ಕುಸಿಯಲು ಮೊದಲ ಕಾರಣ ಎನ್ನುತ್ತಾರೆ ವಿಶ್ಲೇಷಕರು.
ಕಳೆದ ಡಿಸೆಂಬರ್‌ನಲ್ಲೂ ಕಂಪೆನಿಯ ಫಲಿತಾಂಶ ಯಾವುದೇ ಭರವಸೆಯನ್ನು ಮೂಡಿಸದಿರುವುದು ಷೇರುಗಳ ಮತ್ತಷ್ಟು ಕುಸಿತಕ್ಕೆ ಕಾರಣವಾಯಿತು. ಮೂರನೇ ತ್ರೈಮಾಸಿಕದಲ್ಲಿ ಕಂಪೆನಿಯು ಶೇ.2.7ರಷ್ಟು ಅಲ್ಪ ಮಟ್ಟದಲ್ಲಿ ಬೆಳವಣಿಕೆ ಸಾಧಿಸಿದರೂ ಲಾಭ ಶೇ.22.5ರಷ್ಟು ಇಳಿದಿರುವುದು ( 7415 ಕೋಟಿಗಳಿಂದ 5578 ಕೋ.ಗಳಿಗೆ ಇಳಿಕೆ ) ಷೇರುದಾರ ಪಾಲಿಗೆ ಕಹಿಯಾಗಿ ಪರಿಣಮಿಸಿತು.
ಲ್ಯಾಂಡ್ ರೋವರ್, ಜಾಗ್ವರ್‌ಗಳ ಕಳಪೆ ಸಾಧನೆ, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇಳಿಕೆ, ಯರೋಪಿಯನ್ ಮಾರುಕಟ್ಟೆಯಲ್ಲಿ ಎದುರಾದ ಅರ್ಥಿಕ ಸವಾಲುಗಳು,ಚೀನಾ ಮಾರುಕಟ್ಟೆಯಲ್ಲಿ ಕುಸಿದ ಬೇಡಿಕೆ ಟಾಟಾ ಮೋಟಾರ್ಸ್‌ನ ಬೆಳವಣಿಗೆಗೆ ಹಿನ್ನಡೆಯಾಗಿವೆ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ