7 rupees

News @ your fingertips

ಜಿಯೋ , ರಿಟೇಲ್ ಐಪಿಒ ಮೇಲೆ ಕಣ್ಣು

ಆಗಸ್ಟ್ 29 ಗುರುವಾರ ರಿಲಯನ್ಸ್ ಇಂಡಸ್ಟ್ರಿಯ ಮಹಾಸಭೆ ನಡೆಯಲಿದೆ. ಈ ಎಜಿಎಂ ಬಗ್ಗೆ ಮಾರುಕಟ್ಟೆ ಹಾಗೂ ಸಂಸ್ಥೆಯ ಷೇರುದಾರರು ಕುತೂಹಲಿಗಳಾಗಿದ್ದಾರೆ.
ರಿಲಯನ್ಸ್ ಸಮೂಹ ಸಂಸ್ಥೆಯ ಹೊಸ ಯೋಜನೆಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ , ಜಿಯೋ ಮತ್ತು ರಿಲಯನ್ಸ್ ರಿಟೇಲ್ಸ್ ನ ಐಪಿಒಗಳ ಬಗ್ಗೆ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸಭೆಯಲ್ಲಿ ಘೋಷಣೆ ಮಾಡುತ್ತಾರೆಯೇ ಎನ್ನುವ ಕುತೂಹಲ.
ಜಿಯೋ ಹಾಗೂ ರಿಲಯನ್ಸ್ ರಿಟೇಲ್ ಸದ್ಯದಲ್ಲೇ ಐಪಿಒ ಮಾರುಕಟ್ಟೆಗೆ ಬರಲಿದೆ ಎನ್ನುವ ಸುದ್ದಿಗಳು ಹಲವು ಸಮಯದಿಂದ ಓಡಾಡುತ್ತಿವೆ. ಈ ಎರಡು ಕಂಪೆನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು , ದೊಡ್ಡ ಪ್ರಮಾಣದ ಮಾರುಕಟ್ಟೆಯನ್ನು ದಾಖಲಿಸಿಕೊಂಡಿವೆ. ಜೊತೆಯಲ್ಲಿ ಸದ್ಯ ಷೇರು ಮಾರುಕಟ್ಟೆ ಏರುಗತಿಯಲ್ಲಿದ್ದು , ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಐಪಿಒ ಹೊರ ಬರುವ ಸಾಧ್ಯತೆಗಳಿವೆ.
ರಿಲಯನ್ಸ್ ಸಮೂಹದ ವಿಸ್ತರಣೆ ಭಾಗವಾಗಿ ಇಂಧನ ವಲಯದಲ್ಲಿ ಇನ್ನಷ್ಟು ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸಂಸ್ಥೆ ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಅನುಸರಿಸುತ್ತಿದ್ದು , ಅದರ ಭಾಗವಾಗಿ ಹೊಸ ಯೋಜನೆಗಳನ್ನು ಪ್ರಕಟಿಸಬಹುದು ಎನ್ನುವ ನಿರೀಕ್ಷೆ ಷೇರುದಾರದ್ದು. ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಖೇಶ್ ಅಂಬಾನಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

 

× Subscribe us