7 rupees

News @ your fingertips

ಚೇತರಿಕೆಯತ್ತ ಮಾರುಕಟ್ಟೆ

ಶುಕ್ರವಾರ ಎಪ್ರಿಲ್‌೧೯. ಮೊದಲಾರ್ಧದಲ್ಲಿ ಸೆನ್ಸೆಕ್ಸ್ ಸುಮಾರು ೬೦೦ ಅಂಕಗಳ ಕುಸಿತ ಕಂಡರೆ, ದ್ವಿತೀಯಾರ್ಧದಲ್ಲಿ ಸಂಪೂರ್ಣ ಚೇತರಿಕೆ ಕಂಡು, ೬೦೦ ಅಂಕಗಳ ಏರಿಕೆ ಕಂಡಿತು.
ವಿಶ್ವ ವಿದ್ಯಮಾನಗಳು ಮುಖ್ಯವಾಗಿ ಇಸ್ರೇಲ್-ಇರಾನ್ ಸಂಘರ್ಷ ಕುರಿತಂತೆ ಶುಕ್ರವಾರ ಬೆಳಗ್ಗೆ ಹರಿದಾಡಿದ ಕೆಲವು ಸುದ್ದಿಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಕಾರಣವಾದವು. ನಂತರ ಬಂದ ಸ್ಪಷ್ಟನೆ ರೂಪದ ಹೇಳಿಕೆಗಳಿಂದ ಮಾರುಕಟ್ಟೆ ಚೇತರಿಕೆಯತ್ತ ಸಾಗಿತು. ಮುಖ್ಯವಾಗಿ ಬ್ಯಾಂಕ್ ಹಾಗೂ ಮೆಟಲ್ ಸ್ಟಾಕ್‌ಗಳು ರ‌್ಯಾಲಿಗೆ ಕಾರಣವಾದವು.
ಕಳೆದ ಹಲವು ದಿನಗಳ ಕುಸಿತದಿಂದಾಗಿ ಇಂದು ಹೂಡಿಕೆದಾರರು ಶಾರ್ಟ್ ಕವರಿಂಗ್‌ಗೂ ಮುಂದಾಗಿದ್ದು ಕಂಡಬಂತು.
ಸೋಮವಾರವೂ ಮಾರುಕಟ್ಟೆ ಪಾಸಿಟಿವ್ ಆಗಿರುವ ಸಾಧ್ಯತೆಗಳಿವೆ.